Monday, May 19, 2025
Homeಸುದ್ದಿರಾಷ್ಟ್ರೀಯಕೊರೊನಾ ರೂಪಾಂತರಿ ತಳಿಯ ಪ್ರಭಾವ: ಕುಸಿದ ಷೇರು ಮಾರುಕಟ್ಟೆ

ಕೊರೊನಾ ರೂಪಾಂತರಿ ತಳಿಯ ಪ್ರಭಾವ: ಕುಸಿದ ಷೇರು ಮಾರುಕಟ್ಟೆ

ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ತಳಿಯು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಭೀತಿ ಸೃಷ್ಟಿಸಿದೆ. ಇದರ ಪರಿಣಾಮ ದೇಶದ ಷೇರು ಮಾರುಕಟ್ಟೆಗಳ ಮೇಲೆಯೂ ಆಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 1,687 ಅಂಶ ಕುಸಿದಿದೆ. ಹೂಡಿಕೆದಾರರ ಸಂಪತ್ತು ಮೌಲ್ಯವು ಒಂದೇ ದಿನದಲ್ಲಿ 7.35 ಲಕ್ಷ ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ.

ವೈರಾಣುವಿನ ಹೊಸ ತಳಿಯು ಜಾಗತಿಕ ಆರ್ಥಿಕ ವ್ಯವಸ್ಥೆಗೆ ಭಾರಿ ಏಟು ನೀಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಆಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇಕಡ 5.62ರಷ್ಟು ಇಳಿಕೆ ಆಗಿದ್ದು, ಪ್ರತಿ ಬ್ಯಾರೆಲ್ ತೈಲದ ಬೆಲೆಯು 77.60 ಅಮೆರಿಕನ್ ಡಾಲರ್‌ಗೆ ತಲುಪಿದೆ.