Saturday, December 14, 2024
Homeಕ್ರೀಡೆಕ್ರಿಕೆಟ್ಕೊಹ್ಲಿಯ ಕೊನೇಯ ಟಿ20 ನಾಯಕತ್ವ: ವಿಶ್ವಕ‍ಪ್‌ ಗೆಲ್ಲುವುದೇ ಭಾರತ

ಕೊಹ್ಲಿಯ ಕೊನೇಯ ಟಿ20 ನಾಯಕತ್ವ: ವಿಶ್ವಕ‍ಪ್‌ ಗೆಲ್ಲುವುದೇ ಭಾರತ

ದುಬೈ: ಭಾರತ ಕಂಡ ಕೆಲವೇ ಕೆಲವು ಅದ್ಭುತ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್‌ ಕೊಹ್ಲಿ ಈ ಬಾರಿಯ ಟಿ 20 ವಿಶ್ವಕಪ್‌ ಮುಗಿದ ಬಳಿಕ ಈ ಚುಟುಕು ಕ್ರಿಕೆಟ್‌ನ ನಾಯಕತ್ವವನ್ನು ತ್ಯಜಿಸಲಿದ್ದಾರೆ. ವಿಶ್ವಕಪ್‌ ಗೆಲ್ಲುವ ಮೂಲಕ ನಾಯಕತ್ವಕ್ಕೆ ವಿದಾಯ ಹೇಳುವರೇ ಎಂಬ ಕುತೂಹಲ ಮೂಡಿದೆ.

ಬಲಿಷ್ಠ 8 ತಂಡಗಳು ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿ ಬಂದಿರುವ ನಾಲ್ಕು ತಂಡಗಳು ಸೇರಿ ಒಟ್ಟು 12 ತಂಡಗಳು ವಿಶ್ವಕ‍ಪ್‌ನಲ್ಲಿ ಸೆಣಸಲಿವೆ. ಬಲಿಷ್ಠ ತಂಡಗಳಲ್ಲಿ ಅಫ್ಗಾನಿಸ್ಥಾನ ಹೊಂದಿರುವುದು ಮತ್ತು ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿರುವ ತಂಡಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಇರುವುದು ಅಚ್ಚರಿಯ ಸಂಗತಿ. ಅಫ್ಗಾನಿಸ್ತಾನ ಇರುವ ಗುಂಪಿನಲ್ಲಿಯೇ ಭಾರತವೂ ಇರುವುದರಿಂದ ಈ ಬಾರಿ ಲೀಗ್‌ ಹಂತದ ದಾಟಲು ಭಾರತಕ್ಕೆ ಕಷ್ಟವಾಗಲಾರದು. ಅಲ್ಲದೇ ಭಾರತ ತಂಡವು ಮೇಲ್ನೋಟಕ್ಕೆ ಉಳಿದೆಲ್ಲ ತಂಡಗಳಿಗಿಂತ ಬಲಿಷ್ಠವಾಗಿ ಕಾಣುತ್ತಿರುವುದರಿಂದ ವಿಶ್ವಕ‍ಪ್ ಗೆಲ್ಲುವ ಫೇವರೇಟ್‌ ತಂಡವಾಗಿ ಗುರುತಿಸಲಾಗಿದೆ. ಕೊಹ್ಲಿ ನಾಯಕತ್ವದಲ್ಲಿ ಅನೇಕ ಪಂದ್ಯಗಳನ್ನು ಗೆದ್ದಿದ್ದರೂ ಮಹತ್ವದ ಸಂದರ್ಭದಲ್ಲಿ ಕೈಕೊಟ್ಟಿದ್ದೇ ಹೆಚ್ಚು ಇರುವುದು ಮೈನಸ್‌ ಪಾಯಿಂಟ್‌ ಆಗಿದೆ.

ಭಾನುವಾರ ಬದ್ಧ ಪ್ರತಿಸ್ಪರ್ಧಿ ಪಾಕಿಸ್ತಾನದೊಂದಿಗೆ ಮೊದಲ ಪಂದ್ಯವನ್ನು ಭಾರತ ಆಡುವ ಮೂಲಕ ಈ ಬಾರಿಯ ವಿಶ್ವಕಪ್‌ಗೆ ಅಧಿಕೃತ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ನಾಗಲೋಟ ಆರಂಭಿಸಲಿ. ಕೊನೇಯ ಪಂದ್ಯವನ್ನು ಗೆಲ್ಲುವ ಮೂಲಕ ವಿಶ್ವಕ‍ಪ್‌ ಎತ್ತಿ ಹಿಡಿಯಲಿ ಎಂದು ಕ್ರಿಕೆಟ್‌ ಅಭಿಮಾನಿಗಳು ಮಾತ್ರವಲ್ಲ, ಕೊಹ್ಲಿ ಅಭಿಮಾನಿಗಳೂ ಹಾರೈಸುತ್ತಿದ್ದಾರೆ.