ಬೆಂಗಳೂರು: ಬಟ್ಟೆಯಿಂದ ಅಲಂಕಾರ ಮಾಡಿರುವ ಬಸವನನ್ನು ಕರೆದುಕೊಂಡು ಮನೆಮನೆಗೆ ತೆರಳಿ ಶಹನಾಯಿ ವಾದ್ಯ ಊದುವುದನ್ನು, ಆ ಮನೆಗಳಲ್ಲಿ ಕೊಟ್ಟಿದ್ದನ್ನು ಸ್ವೀಕರಿಸಿ ಮುಂದುವರಿಯುವುದನ್ನು ಎಲ್ಲ ಕಡೆ ನೋಡಿರುತ್ತೇವೆ. ಆದರೆ ಇಲ್ಲಿ ಅದಕ್ಕಿಂತ ಭಿನ್ನವಾದ ವಿಡಿಯೊ ಹರಿದಾಡುತ್ತಿದೆ. ಬಸವನ ತಲೆಯಲ್ಲಿ “ಫೋನ್ ಪೆ’ಯ ಕ್ಯುಆರ್ ಕೋಡ್ ತೂಗು ಹಾಕಲಾಗಿದೆ. ಬಸವನನ್ನು ಕರೆದುಕೊಂಡು ಬಂದಾಗ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ವರ್ಗಾವಣೆ ಮಾಡುವ ಈ ವಿಡಿಯೊ ವೈರಲ್ ಆಗಿದೆ.