ಮುಂಬೈ: ಕ್ರಿಕೆಟಿಗ ಶಾರ್ದುಲ್ ಠಾಕೂರ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ತಮ್ಮ ಪ್ರೇಯಸಿ ಮಿಥಾಲಿ ಪಾರೂಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮುಂಬೈನಲ್ಲಿ ಸೋಮವಾರ ನಡೆದ ಅತ್ಯಂತ ಸರಳ ರೀತಿಯ ಸಮಾರಂಭದಲ್ಲಿ ಕುಟುಂಬಸ್ತರು ಮತ್ತು ಆಪ್ತ ಸ್ನೇಹಿತರ ಎದುರು ಶಾರ್ದುಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಯುವ ಬೌಲಿಂಗ್ ಆಲ್‌ರೌಂಡರ್ ಶಾರ್ದುಲ್ ಠಾಕೂರ್ 30 ವರ್ಷದ ಪ್ರತಿಭಾವಂತ ಕ್ರಿಕೆಟಿಗ.
ಕ್ರಿಕೆಟಿಗ ರೋಹಿತ್ ಶರ್ಮಾ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.