Saturday, December 14, 2024
Homeಮಲೆನಾಡು ಕರ್ನಾಟಕಕೊಡಗುಕ್ರಿಕೆಟ್‌ನಲ್ಲಿ ಭಾರತಕ್ಕೆ ಸೋಲು: ಅಭಿಮಾನಿಗೆ ಹೃದಯಾಘಾತ

ಕ್ರಿಕೆಟ್‌ನಲ್ಲಿ ಭಾರತಕ್ಕೆ ಸೋಲು: ಅಭಿಮಾನಿಗೆ ಹೃದಯಾಘಾತ

ಸೋಮವಾರಪೇಟೆ: ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡವು ಸೋಲು ಕಂಡ ಬೇಸರದಲ್ಲಿದ್ದ ಕ್ರಿಕೆಟ್ ಅಭಿಮಾನಿ ದೊಡ್ಡಮಳ್ತೆ ಗ್ರಾಮದ ಡಿ.ಎ.ಉದಯ (55) ಹೃದಯಾಘಾತಕ್ಕೊಳಗಾಗಿ ಭಾನುವಾರ ತಡರಾತ್ರಿ ನಿಧನರಾದರು.

ಕೊನೆವರೆಗೂ ಪಂದ್ಯವನ್ನು ಕುತೂಹಲದಿಂದ ನೋಡುತ್ತಿದ್ದ ಅವರಿಗೆ, ಭಾರತ ತಂಡವು ಸೋಲು ಅನುಭವಿಸಿದ 10 ನಿಮಿಷದಲ್ಲಿಯೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು. ಮನೆಯವರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು. (ಕೊಡಗು ಜಿಲ್ಲೆ): ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡವು ಸೋಲು ಕಂಡ ಬೇಸರದಲ್ಲಿದ್ದ ಕ್ರಿಕೆಟ್ ಅಭಿಮಾನಿ ದೊಡ್ಡಮಳ್ತೆ ಗ್ರಾಮದ ಡಿ.ಎ.ಉದಯ (55) ಹೃದಯಾಘಾತಕ್ಕೊಳಗಾಗಿ ಭಾನುವಾರ ತಡರಾತ್ರಿ ನಿಧನರಾದರು.

ಕೊನೆವರೆಗೂ ಪಂದ್ಯವನ್ನು ಕುತೂಹಲದಿಂದ ನೋಡುತ್ತಿದ್ದ ಅವರಿಗೆ, ಭಾರತ ತಂಡವು ಸೋಲು ಅನುಭವಿಸಿದ 10 ನಿಮಿಷದಲ್ಲಿಯೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದರು. ಮನೆಯವರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು.