Saturday, December 14, 2024
Homeವೈವಿಧ್ಯತಂತ್ರಜ್ಞಾನಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆ ನಡೆಸಿದ ಭಾರತ

ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆ ನಡೆಸಿದ ಭಾರತ


ಹೊಸದಿಲ್ಲಿ: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು 5 ಸಾವಿರ ಕಿ.ಮೀ ದೂರದ ಗುರಿ ತಲುಪಬಲ್ಲ ಅಗ್ನಿ-5 ಹೆಸರಿನ ಖಂಡಾಂತರ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ.. ಇನ್ನು ಕೆಲವು ದಿನಗಳಲ್ಲಿ ವಾಯುದಾಳಿ ಪ್ರತಿರೋಧ ಕ್ಷಿಪಣಿ ಎಸ್ – 400ನ ಘಟಕಗಳು ರಷ್ಯಾದಿಂದ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಇದರಿಂದಾಗಿ ನಮ್ಮ ಸಾಮರಿಕ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ರಕ್ಷಣಾ ವ್ಯವಸ್ಥೆ ಬಲಗೊಳ್ಳಲಿದೆ.

ಪ್ರಸ್ತುತ ಲಭ್ಯವಿರುವ ವಾಯುದಾಳಿ ಪ್ರತಿರೋಧಕಗಳ ಪೈಕಿ ಅತ್ಯುತ್ತಮವಾದದ್ದು ಎನಿಸಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕ್ಷಿಪ್ರವಾಗಿ ಮತ್ತು ಸುಲಭವಾಗಿ ಕೊಂಡೊಯ್ಯಬಹುದು ಎಂಬುದು ಇದರ ಹೆಗ್ಗಳಿಗೆ. ಶತ್ರು ದೇಶದ ಯಾವುದೇ ಬಗೆಯ ವಾಯುದಾಳಿಯನ್ನು ಇದು ಗುರುತಿಸುತ್ತದೆ ಮತ್ತು ನಿಖರವಾದ ಪ್ರತಿದಾಳಿಗೆ ಅನುಕೂಲ ಒದಗಿಸುತ್ತದೆ ಎಂಬುದು ಹೆಚ್ಚುಗಾರಿಕೆ.

ಆಧುನಿಕ ಜಗತ್ತಿನ ಯುದ್ಧಗಳಲ್ಲಿ ಸೋಲು ಮತ್ತು ಗೆಲುವನ್ನು ಅತ್ಯಾಧುನಿಕ ಯುದ್ಧ ವಿಮಾನಗಳು, ಕ್ಷಿಪಣಿಗಳು, ವಾಯುದಾಳಿ ಪ್ರತಿರೋಧಕ ವ್ಯವಸ್ಥೆಗಳು ನಿರ್ಧರಿಸುತ್ತವೆ. ಶತ್ರುರಾಷ್ಟ್ರದ ಉದ್ದಗಲ ತಲುಪಬಲ್ಲ ಖಂಡಾಂತರ ಕ್ಷಿಪಣಿಯಂತಹ ಅಸ್ತ್ರಗಳ ಜೊತೆಗೆ ಪ್ರತಿದಾಳಿಯಿಂದ ತಪ್ಪಿಸಿಕೊಳ್ಳಲು ಗುರಾಣಿಯೂ ಮುಖ್ಯವಾಗುತ್ತದೆ.