Monday, May 19, 2025
Homeಮಧ್ಯ ಕರ್ನಾಟಕತುಮಕೂರುಗಾಂಜಾ ಮಾರಾಟ: ಒಬ್ಬನ ಬಂಧನ

ಗಾಂಜಾ ಮಾರಾಟ: ಒಬ್ಬನ ಬಂಧನ

ಮಧುಗಿರಿ: ಘಟನೆ ಪಟ್ಟಣದ ಪಾವಗಡ ವೃತ್ತದ ಸಮೀಪ ಬುಧವಾರ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು, 620 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ನಿವಾಸಿ ಮೊಹಮ್ಮದ್ ಆಸಾದ್ ಅವರ ಪುತ್ರ ಕಲೀಮ್ (45) ಬಂಧಿತ ಆರೋಪಿ.

ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿವೈಎಸ್‌ಪಿ ಆರ್.ಸುರೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಅಬಕಾರಿ ನಿರೀಕ್ಷಕರಾದ ನಾಗರಾಜು, ರಾಮಮೂರ್ತಿ, ಉಪ ನಿರೀಕ್ಷಕ ನಾಗಲಿಂಗಚಾರ್ ಭಾಗವಹಿಸಿದ್ದರು.