ಹೊಸದಿಲ್ಲಿ: ಇಸ್ಲಾಮಾದ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಅಲ್ಲಿನ ಸಮಾ ಟಿವಿ ವರದಿ ಮಾಡಿದೆ.
ನನ್ನ ಸೋದರಳಿಯ ಮದುವೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ರೆಹಮ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
‘ಅದೃಷ್ಟವಶಾತ್, ನಾನು ಅದರಲ್ಲಿ ಇರಲಿಲ್ಲ. ಆಗತಾನೆ ಕಾರು ಬದಲಿಸಿದ್ದೆ. ನನ್ನ ಆಪ್ತ ಕಾರ್ಯದರ್ಶಿ ಮತ್ತು ಡ್ರೈವರ್ ಇದ್ದರು’ಈ ದಾಳಿ ಬಗ್ಗೆ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ನಾನು ಮತ್ತು ನನ್ನ ಸಿಬ್ಬಂದಿ ದಾಳಿ ಬಗ್ಗೆ ಎಫ್‌ಐಆರ್ ದಾಖಲಿಸಲು ಹಲವು ಗಂಟೆಗಳಿಮದ ಕಾಯುತ್ತಿದ್ದೇವೆ ಎಂದು ಆಪಾದಿಸಿದ್ಧಾರೆ.
‘ಈಗ ಬೆಳಗ್ಗೆ 9 ಗಂಟೆಯಾಗಿದೆ. ರಾತ್ರಿ ಇಡೀ ನನ್ನ ಸಿಬ್ಬಂದಿ ಒಂದು ಸೆಕೆಂಡ್ ಸಹ ನಿದ್ದೆ ಮಾಡದೆ ಇಸ್ಲಾಮಾಬಾದ್‌ನ ಶಾಮ್ಸ್ ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದಾರೆ. ಈಗಲೂ ಎಫ್‌ಐಆರ್ ದಾಖಲಾಗಿಲ್ಲ. ತನಿಖೆ ನಡೆಯುತ್ತಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ದೂರಿನ ಪ್ರತಿಯನ್ನು ರೆಹಮ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ರಾವಲ್ಪಿಂಡಿ–ಇಸ್ಲಾಮಾಬಾದ್ ಹೆದ್ದಾರಿಯ ಐಜೆಪಿ ರಸ್ತೆ ಬಳಿ ಇಬ್ಬರು ಬಂದೂಕುಧಾರಿಗಳು ನಮ್ಮನ್ನು ತಡೆಯಲು ಯತ್ನಿಸಿದರು. ಶಂಕಿತರ ವಯಸ್ಸು ಸುಮಾರು 25 ರಿಂದ 30 ವರ್ಷವಿರಬಹುದು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.