Saturday, December 14, 2024
Homeಕರಾವಳಿ ಕರ್ನಾಟಕಉಡುಪಿಗುಜರಿಯಲ್ಲಿ ಸಿಲಿಂಡರ್ ಸ್ಫೋಟ: ಮೃತರ ಸಂಖ್ಯೆ 3ಕ್ಕೇರಿಕೆ

ಗುಜರಿಯಲ್ಲಿ ಸಿಲಿಂಡರ್ ಸ್ಫೋಟ: ಮೃತರ ಸಂಖ್ಯೆ 3ಕ್ಕೇರಿಕೆ

ಉಡುಪಿ : ಕಾಪು ತಾಲ್ಲೂಕಿನ‌ ಮಲ್ಲಾರು ಫಕೀರನಕಟ್ಟೆಯಲ್ಲಿರುವ ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದಾರೆ.

ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ರಜಬ್ ಮಲ್ಲಾರು, ರಜಾಕ್ ಚಂದ್ರನಗರ ಹಾಗೂ ನಿಯಾಜ್ ಮೃತರು.

ಗುಜರಿಯಲ್ಲಿದ್ದ ಸಿಲಿಂಡರ್ ಏಕಾಏಕಿ ಸಿಡಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಜೀವವಾಗಿ ದಹನವಾಗಿದ್ದಾರೆ. ನಿಯಾಜ್ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು.

ಬೆಂಕಿ ನಂದಿಸಲು ಮುಂದಾಗಿದ್ದ ಬೆಳಪು ಗ್ರಾಮ ಪಂಚಾಯಿತಿ ಸದಸ್ಯ ಫಹಿಂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹತ ತಪ್ಪಿಸಿದ್ದಾರೆ.