Saturday, December 14, 2024
Homeರಾಜ್ಯಕಲ್ಯಾಣ ಕರ್ನಾಟಕಚಕ್ಕಡಿ ಓಡಿಸಿ ಹುರಿದುಂಬಿಸಿದ ಶಾಸಕಿ

ಚಕ್ಕಡಿ ಓಡಿಸಿ ಹುರಿದುಂಬಿಸಿದ ಶಾಸಕಿ

ಖಾನಾಪುರ : ತಾಲ್ಲೂಕಿನ ಕಾಂಜಳೆ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಂಗೀ ಶರ್ಯತ್ತು ಉದ್ಘಾಟಿಸಿದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಸ್ವತಃ ಶರ್ಯತ್ತಿನ ಚಕ್ಕಡಿ ಓಡಿಸಿ ಶರ್ಯತ್ತಿನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಬಳಿಕ ಮಾತನಾಡಿದ ಅವರು, ಇಂದು ಕುಸ್ತಿ, ಕಬ್ಬಡ್ಡಿ, ಜಂಗೀ ಶರ್ಯತ್ತು ಸೇರಿದಂತೆ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಗ್ರಾಮೀಣ ಭಾಗದ ಯುವಕರನ್ನು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಪ್ರಯತ್ನಗಳು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದಿಗಂಬರ ಪಾಟೀಲ, ಮಾಜಿ ಜಿ.ಪಂ ಸದಸ್ಯ ನಾರಾಯಣ ಕಾರ್ವೇಕರ, ನೀಲಾವಡೆ ಗ್ರಾಪಂ ಉಪಾಧ್ಯಕ್ಷ ವಿನಾಯಕ ಮುತಗೇಕರ ಮತ್ತಿತರರು ಇದ್ದರು.