ಮೈಸೂರು: ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮದ ನಿವಾಸಿ ಅರ್ಜುನ (24) ಅವರನ್ನು ಚಾಕುವಿನಿಂದ ಇರಿದು ಹಾಗೂ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.
ಬುಧವಾರ ತಡರಾತ್ರಿ ಇವರನ್ನು ಫೋನ್ ಮಾಡಿ ಗ್ರಾಮದ ಹೊರ ವಲಯಕ್ಕೆ ಕರೆಸಿಕೊಂಡ ಕೆಲವರು ಚಾಕುವಿನಿಂದ ಇರಿದು, ಅಟ್ಟಾಡಿಸಿದ್ದಾರೆ. ನಂತರ ಹಳ್ಳಕ್ಕೆ ಬಿದ್ದ ಇವರ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡ ಇವರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು.