Saturday, December 14, 2024
Homeಮೈಸೂರು ವಿಭಾಗಮೈಸೂರುಜೀನ್ಸ್ ಪ್ಯಾಂಟ್, ಟೀಷರ್ಟ್ ಧರಿಸದಂತೆ ಉಪನ್ಯಾಸಕರಿಗೆ ವಿಧಿಸಿದ್ದ ನಿರ್ಬಂಧ ಆದೇಶ ವಾಪಸ್

ಜೀನ್ಸ್ ಪ್ಯಾಂಟ್, ಟೀಷರ್ಟ್ ಧರಿಸದಂತೆ ಉಪನ್ಯಾಸಕರಿಗೆ ವಿಧಿಸಿದ್ದ ನಿರ್ಬಂಧ ಆದೇಶ ವಾಪಸ್

ಮೈಸೂರು: ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯ ವೇಳೆಯಲ್ಲಿ ಜೀನ್ಸ್ ಪ್ಯಾಂಟ್, ಟೀ ಷರ್ಟ್ ಧರಿಸದಂತೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಆದೇಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ವಾಪಸ್ ಪಡೆದಿದ್ದಾರೆ.

ತರಗತಿಯಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೆ. ಜೊತೆಗೆ ಜಿಲ್ಲಾಧಿಕಾರಿ ಜೊತೆ ಈ ವಾರ ಸಿಇಟಿಗೆ ಸಂಬಂಧಿüಸಿದಂತೆ ಸಭೆ ಇತ್ತು. ಆ ಸಭೆಗೆ ಉಪನ್ಯಾಸಕರು ಜೀನ್ಸ್ ಪ್ಯಾಂಟ್, ಟೀ ಷರ್ಟ್ ಧರಿಸಿಬಂದರೆ ಮುಜುಗರ ಆಗಬಹುದೆಂಬ ಕಾರಣಕ್ಕೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಆದೇಶ ಹೊರಡಿಸಿದ್ದೆ. ಈಗ ಆ ಆದೇಶ ವಾಪಸ್ ಪಡೆದಿದ್ದೇನೆ ಎಂದು ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸಮೂರ್ತಿ ತಿಳಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕೂಡ ಕರೆ ಮಾಡಿ ವಿಚಾರಿಸಿದರು. ಆದೇಶ ವಾಪಸ್ ಪಡೆದಿರುವ ಮಾಹಿತಿಯನ್ನು ಅವರಿಗೂ ನೀಡಿದ್ದೇನೆ ಎಂದರು.

ಡಿಡಿಪಿಯು ಹೊರಡಿಸಿದ್ದ ಆದೇಶಕ್ಕೆ ಉಪನ್ಯಾಸಕರ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಲವರು ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದರು.