Monday, May 19, 2025
Homeಕಲ್ಯಾಣ ಕರ್ನಾಟಕಕಲಬುರ್ಗಿಜೆಇ ಶಾಂತಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಎಸಿಬಿಆದಾಯಕ್ಕಿಂತ ಶೇ 406ರಷ್ಟು ಅಧಿಕ ಆಸ್ತಿ!

ಜೆಇ ಶಾಂತಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಎಸಿಬಿಆದಾಯಕ್ಕಿಂತ ಶೇ 406ರಷ್ಟು ಅಧಿಕ ಆಸ್ತಿ!

ಜೆಇ ಶಾಂತಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಎಸಿಬಿಆದಾಯಕ್ಕಿಂತ ಶೇ 406ರಷ್ಟು ಅಧಿಕ ಆಸ್ತಿ!

ಕಲಬುರಗಿ: ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ (ಜೆಇ) ಶಾಂತಗೌಡ ಬಿರಾದಾರ ಅವರ ಮನೆಗಳು, ಕಚೇರಿ ಮೇಲೆ ಬುಧವಾರ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆದಾಯಕ್ಕಿಂತ ಶೇ 406ರಷ್ಟು ಆಸ್ತಿ ಇರುವುದನ್ನು ಪತ್ತೆ ಹಚ್ಚಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

2002ರಲ್ಲಿ ಸೇವೆಗೆ ಸೇರ್ಪಡೆಯಾಗಿರುವ ಶಾಂತಗೌಡ ಅವರ ವೇತನ ಪ್ರಸ್ತುತ ₹ 51 ಸಾವಿರ ಇದೆ. 19 ವರ್ಷಗಳ ಸೇವಾವಧಿಯ ವೇತನ ಹಾಗೂ ಸ್ಥಿರಾಸ್ತಿಯಿಂದ ಬಂದ ಆದಾಯವನ್ನು ಲೆಕ್ಕ ಹಾಕಿದರೆ ₹ 1.09 ಕೋಟಿ ಆಗಬೇಕಿತ್ತು. ಆದರೆ, ದಾಳಿ ನಡೆಸಿದ ಸಂದರ್ಭದಲ್ಲಿ 2.33 ಕೋಟಿ ಮೊತ್ತದ ಆದಾಯ ಇರುವುದು ಪತ್ತೆಯಾಗಿದೆ. ₹ 30 ಲಕ್ಷ ಮೊತ್ತದ ಚರಾಸ್ತಿ ಇರಬೇಕಿತ್ತು. ಆದರೆ, ₹ 1.18 ಕೋಟಿ ಮೊತ್ತದ ವಸ್ತುಗಳು ಪತ್ತೆಯಾಗಿವೆ.

ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ₹ 1.13 ಕೋಟಿ ಇರಬೇಕಿತ್ತು. ಆದರೆ, ₹ 3.24 ಕೋಟಿ ಆಸ್ತಿ ಪತ್ತೆಯಾಗಿದೆ. ಬೆಂಗಳೂರಿನ ಯಲಹಂಕದ ಬೆಲ್ಲಹಳ್ಳಿಯಲ್ಲಿರುವ ನಿವೇಶನ, ಯಡ್ರಾಮಿ ತಾಲ್ಲೂಕಿನ ಹಂಗರಗಾ (ಬಿ) ಗ್ರಾಮದ ಫಾರ್ಮ್‌ ಹೌಸ್‌ನಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ, ತೋಟದಲ್ಲಿ ಬೇಲಿ ಹಾಕಿಸಿರುವುದು, ಶೆಡ್‌ ನಿರ್ಮಿಸಿರುವುದು ಹಾಗೂ ಬಾವಿ, ಮೂರು ಕಾರುಗಳು, ಎರಡು ದ್ವಿಚಕ್ರ ವಾಹನಗಳು, ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳು, ನಿರ್ಮಿಸಿರುವುದಕ್ಕೆ ಖರ್ಚಾದ ಹಣದ ಆದಾಯ ಮೂಲವನ್ನು ತೋರಿಸಿಲ್ಲ. ಹೀಗಾಗಿ ಶೇ 406ರಷ್ಟು ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಈಶಾನ್ಯ ವಲಯದ ಎಸಿಬಿ ಎಸ್ಪಿ ಮಹೇಶ ಮೇಘಣ್ಣವರ ತಿಳಿಸಿದ್ದಾರೆ.