Monday, May 19, 2025
Homeಮಧ್ಯ ಕರ್ನಾಟಕದಾವಣಗೆರೆಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆ

ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆ

ದಾವಣಗೆರೆ: ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಟಿಪ್ಪು ಸುಲ್ತಾನ್‌ 271ನೇ ಜನ್ಮಾದಿನವನ್ನು ಬುಧವಾರ ಯೂನಿಯನ್‌ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಇಸ್ಮತ್ ಪಜೀರ್ ಅವರ ‘ಟಿಪ್ಪು ಸುಲ್ತಾನ’ ಸುಳ್ಳು ಮತ್ತು ಸತ್ಯಗಳ ವಿಮರ್ಶಾ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಬೀಡಿ ಕಾರ್ಮಿಕ ಮಹಿಳೆಯರು ತಮ್ಮ ಮಕ್ಕಳಿಗೆ ಈ ಪುಸ್ತಕವನ್ನು ಓದಿಸುವ ಜೊತೆಗೆ ತಾವು ಕೂಡ ಅರ್ಥವನ್ನುಕೊಳ್ಳಬೇಕು. ಟಿಪ್ಪು ಅವರ ಸಾಧನೆ, ಕೊಡುಗೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಯೂನಿಯನ್‌ ಕಾರ್ಯದರ್ಶಿ ಕರಿಬಸಪ್ಪ ತಿಳಿಸಿದರು.

ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ಸದಸ್ಯರಾದ ನಾಹೇರ, ಹಸೀನ, ನೂರ್ ಫಾತೀಮ, ಶಾಹೀನ, ಫರೀದ ಬಾನು, ಖತ್ಮುನ್ನಿಸ, ಹೂರುನ್ನಿಸ ಅವರೂ ಇದ್ದರು.