ಮೈಸೂರು: ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆಯ ಹಿಂಭಾಗದಲ್ಲಿನ ಪಾಲಿಕೆ ಒಣ ತ್ಯಾಜ್ಯ ಸಂಗ್ರಹ ಕೇಂದ್ರಕ್ಕೆ ಶನಿವಾರ ಬೆಳಿಗ್ಗೆ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದೆ.
‘ಬೆಳಿಗ್ಗೆ 10.49ರ ವೇಳೆಗೆ ಸ್ಥಳೀಯರೊಬ್ಬರಿಂದ ಬೆಂಕಿ ಅವಘಡದ ಕರೆ ಬಂದಿತು. ಅರ್ಧ ಗಂಟೆಯಿಂದ ಕಾರ್ಯಾಚರಣೆ ನಡೆಸಿದ್ದೇವೆ. ಬೆಂಕಿ ಕಾರಣ ಕುರಿತು ತಿಳಿದುಬಂದಿಲ್ಲ. ಕಾರ್ಯಾಚರಣೆ ನಂತರ ಕಾರಣ ತಿಳಿಯಲಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ತಿಳಿಸಿದರು.
ತಂಡದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದಾರೆ..
ಮಾರುಕಟ್ಟೆ, ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿತ್ತು.