ಬೆಂಗಳೂರು: ನಟಿಯಾಗಿ ಹೆಸರುವಾಸಿಯಾಗಿದ್ದರೂ ದೇವಸ್ಥಾನದಲ್ಲಿ ಕಸ ಗುಡಿಸಿ ಅಚ್ಚರಿ ಮೂಡಿಸಿದ್ದಾಳೆ ಈ ನಟಿ.
ಕೃತಿ ಕರಬಂದ ಅವರು ಮೂಲತಃ ಅಪ್ಪಟ ಕನ್ನಡಿಗ ಹುಡುಗಿ.. ಬೆಳೆದು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಮೇಲೆ ತಮಗೆ ಹಲವಾರು ಅವಕಾಶಗಳು ಬಂದಿದ್ದವು. ತೆಲುಗು, ತಮಿಳು, ಮಾತ್ರವಲ್ಲದೆ ಹಿಂದಿಯಲ್ಲಿ ಕೂಡ ನಟಿಸುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದಾರೆ.
ಕೃತಿ ಕರಬಂದ ದೊಡ್ಡ ಸ್ಟಾರ್ ಹೀರೋಯಿನ್ ಆಗಿದ್ದರೂ ಕೂಡ ಸಂಪ್ರದಾಯ ಹಾಗೂ ನಮ್ಮ ಪದ್ಧತಿಗಳನ್ನು ಮರೆತಿಲ್ಲ. ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳಿಗೆ ಪ್ರಸಾದ ನೀಡುವ ಮೂಲಕ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ ಇದನ್ನು ನೋಡಿದಂತಹ ನೆಟ್ಟಿಗರು ಹಾಗೂ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕೃತಿ ಕರಬಂದ “ಗೆಸ್ಟ್ ಇನ್ ಲಂಡನ್” ಎಂಬ ಚಿತ್ರದ ಸಿನಿಮಾದ ಚಿತ್ರೀಕರಣಕ್ಕಾಗಿ ತೆರಳಿದ್ದರು. ಈ ಸಮಯದಲ್ಲಿ ಚಿತ್ರೀಕರಣ ಮಾಡುವ ಪ್ರದೇಶದ ಪಕ್ಕದಲ್ಲಿಯೇ ಒಂದು ದೇವಸ್ಥಾನ ಇರುವುದನ್ನು ಗಮನಕ್ಕೆ ಬಂದಿತ್ತು. ನಿತ್ಯ ಚಿತ್ರೀಕರಣಕ್ಕೆ ತೆರಳುವ ಮುನ್ನ ಈ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡತೊಡಗಿದರು. ಪ್ರತಿದಿನ ಸಂಜೆ ಚಿತ್ರೀಕರಣ ಮುಗಿಸಿ ಬರುವಾಗ ದೇವಸ್ಥಾನಕ್ಕೆ ಹೋಗಿ ಸ್ವಚ್ಛತಾ ಕಾರ್ಯ ಮಾಡತೊಡಗಿದರು.
ಅಲ್ಲದೇ ದೇವಾಲಯಕ್ಕೆ ಬರುವ ಭಕ್ತಾರಿಗೆ ಕೈಯ್ಯಾರೆ ಪ್ರಸಾದವನ್ನು ಹಂಚಿದರು. ಇದು ಎಲ್ಲೆಡೆ ವೈರಲ್ ಆಗಿದೆ.