Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆನಕಲಿ ಬಂಗಾರ ಮಾರಾಟಕ್ಕೆ ಯತ್ನ: ಐವರ ಬಂಧನ

ನಕಲಿ ಬಂಗಾರ ಮಾರಾಟಕ್ಕೆ ಯತ್ನ: ಐವರ ಬಂಧನ

ದಾವಣಗೆರೆ: ನಗರದ ಜೆ.ಎಚ್‌. ಪಟೇಲ್‌ ಬಡಾವಣೆಯ ಸ್ಟೇಡಿಯಂ ಸಮೀಪ ನಕಲಿ ಬಂಗಾರವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಡಿಸಿಆರ್‌ಬಿ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಜಾಲದ ಬಗ್ಗೆ ಸಿಕ್ಕ ಸುಳಿವು ಆಧರಿಸಿ ಡಿಸಿಆರ್‌ಬಿ ಡಿಎಸ್‌ಪಿ ಬಿ.ಎಸ್‌. ಬಸವರಾಜ ಮಾರ್ಗದರ್ಶನದಲ್ಲಿ ಸಿಇಎನ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ.ವಿ. ಗಿರೀಶ್‌, ಸಿಬ್ಬಂದಿಯಾದ ಪ್ರಕಾಶ್‌, ನಾಗರಾಜ, ಗೋವಿಂದರಾಜು, ಲೋಹಿತ್‌, ಮಲ್ಲಿಕಾರ್ಜುನ, ಮುತ್ತುರಾಜ, ದ್ಯಾಮೇಶ್‌ ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ 3 ಕೆ.ಜಿ. 422 ಗ್ರಾಂ ನಕಲಿ ಬಂಗಾರ, ಕಾರು ಹಾಗೂ ಒಂದು ಬೈಕ್‌ ಅನ್ನು ವಶಪಡಿಸಿಕೊಂಡಿದೆ.

ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.