” ನನ್ನ ರಾಜೀವ್ ನನಗೆ ಮರಳಿ ನೀಡಿ ..
ನಾನು ಹಿಂತಿರುಗಿ ಹೋಗುತ್ತೇನೆ
ನೀವು ಅವರನ್ನು ನನಗೆ ಹಿಂತಿರುಗಿಸದಿದ್ದರೆ ನಾನು ಇಲ್ಲಿಯೇ ಈ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತೇನೆ “
ಏನಾಯಿತೆಂದು ನಿಮಗೆ ತಿಳಿದಿಲ್ಲ,
ನಾನು ಹೇಗೆ ಭೇಟಿಮಾಡಿದೆ ಎಂದು ನಿಮಗೆ ತಿಳಿದಿಲ್ಲ.
ಅವರ ಆ ಮುಗುಳ್ನಗೆ, ಎತ್ತರ ಅವರ ಆಕರ್ಷಣೆಯ ಕಣ್ಣುಗಳು, ಆ ವರ್ಚಸ್ಸು. ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ನಾನು ಅವರನ್ನು ಎಷ್ಟು ಸಮಯ ನೋಡಿದೆ ಎಂದು ನನಗೆ ತಿಳಿಯಲಿಲ್ಲ.
ನಾನು ನನ್ನ ಸ್ನೇಹಿತನೊಬ್ಬನನ್ನು ಕೇಳಿದೆ ಅವರು ಯಾರು ಎಂದು. ಅವರು ಒಬ್ಬ ಭಾರತೀಯ, ಪಂಡಿತ್ ನೆಹರೂ ಅವರ ಕುಟುಂಬದ ಕುಡಿ ಎಂದಷ್ಟೇ ಉತ್ತರಿಸಿದನು.
ನಾನು ನೋಡುತ್ತಲೇ ಇದ್ದೆ.
ಮರುದಿನ ಊಟಕ್ಕೆ ಹೊರಟಾಗ
ಅವರು ಕೂಡ ಅಲ್ಲಿದ್ದರು,
ಆ ದಿನಗಳು ಎಷ್ಟು ಸಂತೋಷವಾಗಿತ್ತೆಂದರೆ ಅದು ಸ್ವರ್ಗವಾಗಿತ್ತು.ನಾವು ನದಿಗಳ ಉದ್ದಕ್ಕೂ ಸವಾರಿ ಮಾಡುತ್ತಿದ್ದೆವು, ಕಾರಿನಲ್ಲಿ ಓಡುತ್ತಿದ್ದೆವು, ಕೈ ಕೈ ಹಿಡಿದು ಬೀದಿಗಳಲ್ಲಿ ನಡೆದಾಡುತ್ತಿದ್ದೆವು, ಇಬ್ಬರು ಸಿನಿಮಾಗಳನ್ನು ನೋಡುತ್ತಿದ್ದೆವು.
ನಾವು ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸಿದ್ದು ನನಗೆ ನೆನಪಿಲ್ಲ, ಅದರ ಅಗತ್ಯವೂ ಇರಲಿಲ್ಲ, ಎಲ್ಲವೂ ಸಹಜವಾಗಿತ್ತು, ನಾವು ಇಬ್ಬರು ಒಬ್ಬರಿಗೊಬ್ಬರು ಹುಟ್ಟಿದ್ದೇವೆ ನಾವು ಒಟ್ಟಿಗೆ ಬದುಕುವ ಸಮಯ ಎಂದು ಆಗಲೇ ನಿರ್ಧರಿಸಿದೆವು.
ಇಂದಿರಾ ಗಾಂಧಿ ಆಗ ಪ್ರಧಾನಿಯಾಗಿದ್ದರು.
ಅವರು ಇಂಗ್ಲೆಂಡ್ ಬಂದಾಗ ರಾಜೀವ್ ಭಯ ದಿಂದಲೆ ನಾವು ಮದುವೆಯಾಗಲು ನಿಮ್ಮ ಅನುಮತಿ ಬೇಕೆಂದು ಇಂದಿರಾಜಿ ಗೆ ಕೇಳಿದ್ದರು ಇಂದಿರಾ ನಮ್ಮನ್ನು ಭಾರತಕ್ಕೆ ಬರಲು ಹೇಳಿದರು.
ಭಾರತದ ಯಾವುದೇ ಮೂಲೆಯಲ್ಲಿ ರಾಜೀವ್ ಅವರೊಂದಿಗೆ ಇರಲು ನನಗೆ ಧೈರ್ಯವಿದೆ.
ಇಂದಿರಾ ಜಿ ಮದುವೆಗೆ ನೆಹರು ಜಿ ಉಡುಗೊರೆ ಕೊಟ್ಟಿದ್ದ ಆ ಗುಲಾಬಿ ಬಣ್ಣದ ಸೀರೆಯನ್ನು ನಾನು ಧರಿಸಿದ್ದೆ. ರಾಜೀವ್ ನಾನು ಒಂದಾದೆವು ನನ್ನ ಕನಸು ನನಸಾದ ಸಮಯ ಅದು,
ನಾನು ಮತ್ತು ರಾಜೀವ್ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಿ ನಾನು ಇಲ್ಲಿಯೇ ನೆಲೆಸಿದೆ
ದಿನಗಳು ಹೇಗೆ ಗತಿಸಿ ಹೋದವು ಎಂಬುದು ನನಗೆ ನೆನಪಿಲ್ಲ.
ರಾಜೀವ್ ಸಹೋದರ ವಿಮಾನ ಅಪಘಾತದಲ್ಲಿ ಮೃತಪಟ್ಟಾಗ
ಇಂದಿರಾ ಜಿ ಅವರಿಗೆ ರಾಜಕೀಯ ವಾರಸುದಾರರಾಗಿ ಬೆಂಬಲಕ್ಕೆ ನಿಂತೆವು.
ರಾಜೀವ್ ರಾಜಕೀಯಕ್ಕೆ ಬರಲು ಪ್ರಾರಂಭಿಸಿದರು.
ನನಗೆ ಅದು ಇಷ್ಟವಿಲ್ಲ, ಆದರೆ ನನ್ನ ಪ್ರಯತ್ನ ವಿಫಲ ವಾಯಿತು. ಭಾರತೀಯರಾದ ನೀವು ಹೆಂಡತಿಯ ಮಾತನ್ನು ತಾಯಿಯ ಮುಂದೆ ಕೇಳುವುದಿಲ್ಲ ಎಂಬ ಸತ್ಯ ಅರಿವಾಯಿತು. ಕುಟುಂಬಕ್ಕಾಗಿ ಸಮಯ ನೀಡದ
ಅವರು ರಾಜಕಾರಣಕ್ಕೆ ಬಂದರು, ಸಂಪೂರ್ಣ ವಾಗಿ ಅವರ ಸಮಯವನ್ನು ದೇಶ ಸೇವೆಗಾಗಿ ಕಾಯ್ದಿರಿಸಿದರು.
ಅವರು ದೇಶ ಸೇವೆಗಾಗಿ ಪರಿತಪಿಸುತ್ತದ್ದರು, ಬಡವ ಬಲ್ಲಿದರಿಗಾಗಿ ಸೇವೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತಿದ್ದೆ.
ಸುಖ ಸಂತೋಷವಾಗಿದ್ದೇವೆ ಎಂದು ಕೊಳ್ಳುತ್ತಿದ್ದಾಗ
ಅನಿರೀಕ್ಷಿತವಾಗಿ
ಒಂದು ದಿನ ಮುಂಜಾನೆ ಇಂದಿರಾಜಿ ಮನೆಯಿಂದ ಹೊರಬಂದಾಗ ಗುಂಡಿನ ಸದ್ದು ಕೇಳಿತು, ಹೊರಗೆ ಬಂದು ನೋಡಿದೆ ಇಂದಿರಾಜಿಯ ದೇಹ ರಕ್ತ ಸಿಕ್ತವಾಗಿತ್ತು .ಇಂದಿರಾಜಿ ಜೊತೆ ನನ್ನ ಕೈಗಳು ರಕ್ತದಲ್ಲಿ ತೇವವಾಗಿದ್ದವು, ಅವರ ಜೊತೆಯಲ್ಲಿಯೇ ನಾನೂ ಸಹ ಆಸ್ಪತ್ರೆಗೆ ಹೊರಟೆ ಕೊನೆಗೆ ನನ್ನ ಕೈ ಗಳಲ್ಲಿಯೇ ಅವರ ಆತ್ಮ ಜಾರಿ ಹೋಯಿತು.
ನೀವು ಎಂದಾದರೂ ಸಾವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ರಾಜೀವ್ ಸಂಪೂರ್ಣವಾಗಿ ನಮ್ಮ (ಭಾರತ) ದೇಶಕ್ಕೆ ಸಮರ್ಪಿಸಿ ಕೊಂಡಿದ್ದರು
ನಾನು ಅವರೊಂದಿಗೆ ಪ್ರತಿ ಹಂತದಲ್ಲೂ ಸೇವಕಿಯಾಗಿದ್ದೆ.
ಒಂದು ದಿನ ಅವರನ್ನೂ ಬಲಿಪಡೆದರು. ಇರಿತಕ್ಕೊಳಗಾದರು ಅದೃಷ್ಟವಶಾತ್ ಜೀವಹಾನಿಯಿಂದ ಪಾರಾದರು. ಮತ್ತೊಂದು ದಿನ ಅವರ ದೇಹ ಚೂರುಚೂರಾಯಿತು, ಆ ಚೂರಾದ ದೇಹವೂ ಮನೆಯ ಆವರಣಕ್ಕೆ ಬಂತು . ಅವರ ಮುಖವು ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು.
ಹೊರ ಹೋಗುವಾಗ ನಗುತ್ತಿರುವ ಗುಲಾಬಿ ಹೂವಿನಂತಿದ್ದ ಮುಖ ಇನ್ನಿಲ್ಲದಾಗಿತ್ತು. ನನ್ನ ಮನೆಯಲ್ಲಿ ಒಬ್ಬರಲ್ಲ ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡೆ.
ಈ ದೇಶ ನನ್ನದು, ಈ ಪ್ರೀತಿಯನ್ನು ನನ್ನ ದೇಶದೊಂದಿಗೆ ಮಾತ್ರ ಹಂಚಿಕೊಳ್ಳ ಬಯಸಯತ್ತೇನೆ. ಕೊನೆಯ ಬಾರಿ ನಾನು ಅವರು ನೋಡಿದ ಮುಖವನ್ನು ಮರೆಯಲು ಬಯಸುತ್ತೇನೆ.ಆದರೆ ಮೊದಲು ನಾವು ಬೇಟಿಯಾದ ರೆಸ್ಟೋರೆಂಟ್, ಆ ಸಂಜೆ, ಆ ಮುಗುಳ್ನಗೆ ಮಾತ್ರ ನಾನು ನೆನಪಿಟ್ಟುಕೊಳ್ಳಲು ಬಯಸಿದ್ದೆ. ನಾನು ಈ ದೇಶದಲ್ಲಿ ರಾಜೀವ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ ರಾಜೀವ್ ಇಲ್ಲದೆ ಇನ್ನೂ ಹೆಚ್ಚು. ಜವಾಬ್ದಾರಿಯನ್ನು ನಿರ್ವವಹಿಸಿದ್ದೇನೆ
ಅಧಿಕಾರ ಇರುವವರೆಗೂ ಅವರ ಪರಂಪರೆಯನ್ನು ಮುರಿಯದಂತೆ ನಡೆದುಕೊಂಡು ಬಂದಿದ್ದೇನೆ
ಅದು ಈ ದೇಶದ ಸಮೃದ್ಧಿಯ ಅದ್ಭುತ ಕ್ಷಣಗಳನ್ನು ನನಗೆ ನೀಡಿದೆ.ನಾನು ಮನೆ ಮತ್ತು ಅವರ ಕುಟುಂಬವನ್ನು ಪರಿಪೂರ್ಣ ವಾಗಿ ನಿರ್ವಹಿಸಿದ್ದೇನೆ
ಪರಿಪೂರ್ಣ ಜೀವನವನ್ನು ನಡೆಸಿದ್ದೇನೆ
ನಾನು ನನ್ನ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ.
ರಾಜೀವ್ ನೀಡಿದ ಭರವಸೆಗಳನ್ನೂ ನಾನು ಬಗೆಹರಿಸಿದ್ದೇನೆ.
ಸರ್ಕಾರಗಳು ಸುಂಟರಗಾಳಿ ಯಂತೆ ಬರುತ್ತವೆ ಹೋಗುತ್ತವೆ.ಈ ಸೋಲುಗಳು ಈಗ ನನಗೆ ವ್ಯತ್ಯಾಸವನ್ನುಂಟುಮಾಡುತ್ತವೆ ಎಂದು ನೀವು ಭಾವಿಸುತ್ತೀರಾ?
ನೀವು ಮಾಡುವ ನಿಂದನೆಗಳು ಪರದೇಶಿ, ಬಾರ್ ಬಾಲೆ, ಜರ್ಸಿ ಹಸು, ವಿಧವೆ, ಕಳ್ಳಸಾಗಣೆದಾರಳು, ಪತ್ತೇದಾರಿ…ಇವು ನೀವು ನೀಡಿದ ಕೊಡುಗೆಗಳು.
ನನ್ನ ಬಗ್ಗೆ ಒಂದು ಟಿವಿ ಮಾಧ್ಯಮ ಕೆಟ್ಟದಾಗಿ ಪ್ರಚಾರ ಮಾಡುತ್ತಿದೆ ಅದು ಅನಿಯಂತ್ರಿತವಾಗಿ ತನ್ನ ಪ್ರವೃತ್ತಿಗಳೊಂದಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರತಿನಿತ್ಯ ನಿಂದನೆ ಮಾಡುತ್ತಾರೆ..
ಅವು ನನ್ನನ್ನು ಕಾಡುತ್ತಿವೆಯೇ? ಇಲ್ಲ
ಆ ನಿಂದಕರ ಮೇಲೆ ನನಗೆ ಖಂಡಿತವಾಗಿಯೂ ದ್ವೇಷವಿಲ್ಲ ಅನುಕಂಪವಿದೆ.
ನೆನಪಿಡಿ ಕಣ್ಣು ಮುಂದೆಯೇ ಪ್ರೀತಿಪಾತ್ರರ ಶವವನ್ನು ನೋಡುವುದು ಎಷ್ಟು ದುಃಖಕರವಾದದ್ದು.
ತುಂಬಾ ದುಃಖ ಅನುಭವಿಸಿದ ನಂತರ ನನ್ನ ಮನಸ್ಸು ಕಲ್ಲು ಬಂಡೆಯಾಯಿತು. ಆದರೂ ನೀವು ನನ್ನನ್ನು ದ್ವೇಷಿಸುತ್ತಿದ್ದೀರಿ.
ನಾನು ಇಂದು ಹಿಂತಿರುಗಿ ಹೋಗುತ್ತೇನೆ ಆದರೆ ನನಗೆ ನನ್ನ ರಾಜೀವ್ ರನ್ನು ಹಿಂದಿರುಗಿಸಿ.
ನೀವು ನನ್ನ ರಾಜೀವ್ ರನ್ನು ಹಿಂತಿರುಗಿಸದಿದ್ದರೆ ನೀವು ಶಾಂತಿಯುತವಾಗಿ ನನ್ನ ರಾಜೀವ್ ರ ಸುತ್ತಲಿರುವ ಮಣ್ಣಿನಲ್ಲಿ ಮಣ್ಣಾಗಲು ಬಿಡಿ.
(ಸೋನಿಯಾ ಗಾಂಧಿಯವರ ಪತ್ರದಿಂದ ಆಯ್ದ ಭಾಗ)