Saturday, December 14, 2024
Homeವೈವಿಧ್ಯನಮ್ಮ ಪುರಾಣಗಳು ಎಲ್ಲವೂ ನಮ್ಮವೇ ?

ನಮ್ಮ ಪುರಾಣಗಳು ಎಲ್ಲವೂ ನಮ್ಮವೇ ?

ಯುರೋಪಿಯನ್ ಮಿತ್ರಪಂಥದ ಎರಡನೆಯ ಪ್ರಮುಖ ದೈವವೇ ನಮ್ಮ ನರಸಿಂಹ! ಮಿತ್ರಪಂಥದಲ್ಲಿ ಈ ಉಗ್ರದೇವರಾದ ನರಸಿಂಹನ ಹೆಸರು ‘ಅರಿಮಾನಿಯಸ್’ ಎಂದಿದೆ. ಲ್ಯಾಟಿನ್ ಮೂಲದ ಈ ಅರಿಮಾನಿಯಸ್‌ನನ್ನೇ ಪಾರ್ಸಿ ಭಾಷೆಯಲ್ಲಿ ‘ಅಹ್ರಿಮನ್’ ಎಂದೂ, ಸಂಸ್ಕೃತದಲ್ಲಿ ‘ಆರ್ಯಮನ್’ ಎಂದೂ ಕರೆಯುತ್ತಾರೆ. ಋಗ್ವೇದದಲ್ಲಿನ ಈ ಆರ್ಯಮನ್ ಪುರಾಣಗಳ ಕಾಲಕ್ಕೆ ನರಸಿಂಹನಾದ. ಪಾರ್ಸಿಗಳ ಝೋರಾಷ್ಟಿçಯಾದಲ್ಲಿ ಅಹ್ರಿಮನ್ ದುಷ್ಟ ಶಕ್ತಿಯಾಗಿದ್ದಾನೆ, ದಏವ > ದೇವ ಎಂಬ ಕೆಡುಕಿನ ದುಷ್ಟ ಶಕ್ತಿಯಂತೆಯೇ! ಆರ್.ಡಿ. ಬಾರ್ನೆಟ್ ಅವರು ತಮ್ಮ ಮಿತ್ರ ಪಂಥದ ಅಧ್ಯಯನದ ಎರಡನೇ ಸಂಪುಟದಲ್ಲಿ (ಮ್ಯಾಂಚೆಸ್ಟರ್ ಯೂನಿವರ್ಸಿಟಿ ಪ್ರೆಸ್, ಪು-467) ಭಾರತದ ನರಸಿಂಹನೇ ಅಹ್ರಿಮನ್, ಆರ್ಯಮನ್ ಎಂದು ಖಚಿತಪಡಿಸಿದ್ದಾರೆ. ಯುರೋಪಿನ ಬೇರೆ ಬೇರೆ ಭಾಷೆಗಳಲ್ಲಿ ಅಯಾನ್, ಜು಼ರ್ವನ್, ಕ್ರೋನೋಸ್ ಎಂಬೆಲ್ಲಾ ವಿವಿಧ ಹೆಸರುಗಳೂ ಈ ನರಸಿಂಹನಿಗಿದೆ. ಈ ಯುರೋಪ್ ನರಸಿಂಹನ ನೂರಾರು ಪ್ರತಿಮೆಗಳು ಕೂಡ ಮಿತ್ರಪಂಥದ ಪ್ರಭಾವವಿದ್ದ ಪ್ರದೇಶಗಳಲ್ಲಿ ಸಿಕ್ಕಿವೆ. ಈ ನರಸಿಂಹನಿಗೆ ಯುರೋಪ್‌ನಲ್ಲಿ ಪ್ರಹ್ಲಾದನಂತಹ ಭಕ್ತನೂ, ಹಿರಣ್ಯ ಕಶಿಪುವಿನಂತಹ ಶತ್ರುವೂ ಇರಲಿಲ್ಲವಾಗಿ ಅಲ್ಲಿ ಪುರಾಣ ಹುಟ್ಟಲಿಲ್ಲ.- ಲಕ್ಷ್ಮೀಪತಿ ಕೋಲಾರ

ಚಿತ್ರ : ಭಾರತದಲ್ಲಿ ಪುರಾಣಗಳ ನರಸಿಂಹನ ಪ್ರವೇಶಕ್ಕೂ ಮುಂಚೆಯೇ ಯೂರೋಪಿನ ಮಿತ್ರ ಪಂಥದಲ್ಲಿ ಪ್ರಖ್ಯಾತನಾಗಿದ್ದ ಅರಿಮಾನಿಯಸ್ , ಅಯಾನ್ , ಅರ್ಹಿಮನ್ ಎಂಬ ಹೆಸರುಗಳಿಂದ ಕರೆಸಿಕೊಂಡ ಋಗ್ವೇದದ ಆರ್ಯಮನ್ ಅರ್ಥಾತ್ ನರಸಿಂಹಹೀಗೆ ಅನೇಕ ಆಸಕ್ತಿಕರ ಸಾಂಸ್ಕೃತಿಕ ತುಲನೆಗಳನ್ನು “ಹರಪ್ಪ : ಡಿ ಎನ್ ಎ ನುಡಿದ ಸತ್ಯ” ಕೃತಿಯಲ್ಲಿ ನೀವು ಕಾಣಬಹುದು .