Saturday, December 14, 2024
Homeರಾಜ್ಯಮೈಸೂರು ವಿಭಾಗನಿದ್ದೆಯಲ್ಲಿರುವ ಚುನಾವಣಾ ಆಯೋಗ- ವಾಟಾಳ್ ನಾಗರಾಜ್ ಅರೋಪ

ನಿದ್ದೆಯಲ್ಲಿರುವ ಚುನಾವಣಾ ಆಯೋಗ- ವಾಟಾಳ್ ನಾಗರಾಜ್ ಅರೋಪ

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಚುನಾವಣಾ ಆಯೋಗ ನಿದ್ರಾವಸ್ಥೆಯಲ್ಲಿದೆ‌ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆರೋಪಿಸಿದರು‌.

ಇಲ್ಲಿನ ಜಯಚಾಮರಾಜ ಒಡೆಯರ್ (ಹಾರ್ಡಿಂಜ್) ವೃತ್ತದಲ್ಲಿ ಅವರು ಗುರುವಾರ ಮಲಗಿ ಪ್ರತಿಭಟನೆ ನಡೆಸಿದರು‌. ಭ್ರಷ್ಟಾಚಾರವನ್ನು ತಡೆಯುವಲ್ಲಿ ಅಯೋಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ ಅವರು ವಿಧಾನಪರಿಷತ್ ಚುನಾವಣೆ ಭ್ರಷ್ಟರ ಕೂಟ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿನ್ನದ ನಾಣ್ಯ, ಬೆಳ್ಳಿ ನಾಣ್ಯ ಹಣ ಹೀಗೆ ಎಲ್ಲವನ್ನೂ ಹಂಚಿಕೆ ಮಾಡಲಾಗುತ್ತಿದೆ. ಒಬ್ಬಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಗೂ ಒಂದು ಲಕ್ಷದಷ್ಟು ಹಣ ಬರುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ವಿಧಾನಪರಿಷತ್ ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.