Monday, May 19, 2025
Homeಬೆಂಗಳೂರು ವಿಭಾಗಬೆಂಗಳೂರು ನಗರಪಟಾಕಿ ಸಿಡಿದು ಇಬ್ಬರು ಬಾಲಕರಿಗೆ ಗಾಯ

ಪಟಾಕಿ ಸಿಡಿದು ಇಬ್ಬರು ಬಾಲಕರಿಗೆ ಗಾಯ

ಬೆಂಗಳೂರು: ನಗರದಲ್ಲಿ ಗುರುವಾರ ಪಟಾಕಿ ಸಿಡಿದು ಇಬ್ಬರು ಬಾಲಕರು ಗಾಯಗೊಂಡಿದ್ದಾರೆ.
ಬಸವನಗುಡಿಯ ಅರ್ಹಮ್‌ ಖಾನ್‌ (9) ಎನ್ನುವ ಬಾಲಕನ ಕಣ್ಣಿಗೆ ಪಟಾಕಿಯಿಂದ ಹಾನಿಯಾಗಿದ್ದು, ಮುಖದ ಚರ್ಮ ಸುಟ್ಟು ಹೋಗಿದೆ. ಸದ್ಯ ಬಾಲಕನಿಗೆ ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸವನಗುಡಿ ನಿವಾಸಿಯಾಗಿರುವ ಈ ಬಾಲಕ ಬುಧವಾರ ರಾತ್ರಿ ತನ್ನ ಮನೆಯಲ್ಲಿ ಹೂಕುಂಡ ಪಟಾಕಿ ಸಿಡಿಸಲು ಹೋದಾಗ ಕಣ್ಣಿಗೆ ಗಾಯವಾಗಿದೆ.
ಬಾಲಕನ ಕಣ್ಣಿನ ದೃಷ್ಟಿಗೆ ಸಮಸ್ಯೆಯಾಗಿಲ್ಲ. ಕಣ್ಣಿನ ರೆಪ್ಪೆ ಹಾಗು ಮುಖದ ಚರ್ಮ ಸುಟ್ಟು ಹೋಗಿದ್ದು, ಕಣ್ಣಿನ ಸುತ್ತ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ, ಸ್ಕೂಟರ್‌ನಲ್ಲಿ ಹಿಂದೆ ಕುಳಿತಿದ್ದ 13 ವರ್ಷದ ಬಾಲಕನೊಬ್ಬ ಪಟಾಕಿ ಸಿಡಿದು ಗಾಯಗೊಂಡಿದ್ದಾನೆ. ತಕ್ಷಣ ಬಾಲಕನನ್ನು ಚಿಕ್ಕಲಸಂದ್ರದ ಡಾ. ಅಗರವಾಲ್‌ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.