Saturday, December 14, 2024
Homeರಾಜ್ಯಬೆಂಗಳೂರು ವಿಭಾಗಪಟಾಕಿ ಸಿಡಿದು ಗಾಯ

ಪಟಾಕಿ ಸಿಡಿದು ಗಾಯ

ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಭಾನುವಾರ ಪಟಾಕಿ ಸಿಡಿದು ಬಾಲಕನ ಕಣ್ಣಿಗೆ ಗಾಯವಾಗಿದೆ.

ಹತ್ತು ವರ್ಷದ ಈ ಬಾಲಕನ ಎರಡು ಕಣ್ಣುಗಳಿಗೆ ಗಾಯವಾಗಿದ್ದು, ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.

ಬಾಲಕನಿಗೆ ನಿಯಮಿತವಾಗಿ ತಪಾಸಣೆಗೆ ಒಳಗಾಗುವಂತೆ ಸಲಹೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.