Saturday, December 14, 2024
Homeಮಲೆನಾಡು ಕರ್ನಾಟಕಶಿವಮೊಗ್ಗಪತ್ನಿಗೆ ವಿಡಿಯೊ ಕಾಲ್‌ ಮಾಡಿ ಕಾರಾಗೃಹದ ಸಿಬ್ಬಂದಿ ಆತ್ಮಹತ್ಯೆ

ಪತ್ನಿಗೆ ವಿಡಿಯೊ ಕಾಲ್‌ ಮಾಡಿ ಕಾರಾಗೃಹದ ಸಿಬ್ಬಂದಿ ಆತ್ಮಹತ್ಯೆ

ಶಿವಮೊಗ್ಗ: ಕೌಟುಂಬಿಕ ಕಲಹದಿಂದ ಬೇಸತ್ತ ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ಅಸ್ಪಾಕ್ ಅಲಿ ತೊಗರಿ (24) ಆತ್ಮಹತ್ಯೆ ಮಾಡಿಕೊಂಡವರು. ಇಲ್ಲಿನ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ವಸತಿಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.

ಪತಿ ಜತೆಗೆ ಜಗಳವಾಡಿಕೊಂಡು ಪತ್ನಿ ತವರಿಗೆ ಹೋಗಿದ್ದರು. ಗುರುವಾರ ಬೆಳಿಗ್ಗೆ ವಿಡಿಯೊ ಕಾಲ್‌ ಮಾಡಿ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಈ ಸಮಯದಲ್ಲಿ ಮನನೊಂದ ಅವರು ಪತ್ನಿ ವಿಡಿಯೊ ನೋಡುತ್ತಿರುವಾಗಲೇ ಹಗ್ಗಕ್ಕೆ ಕೊರಳೊಡ್ಡಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಬದುಕಿ ಉಳಿಯಲಿಲ್ಲ’ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಅಸ್ಪಾಕ್ ಅಲಿ ತೊಗರಿ ಕಳೆದೆರಡು ವರ್ಷದಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತುಂಗಾ ನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.