ಕೊಪ್ಪಳ: ಇಲ್ಲೊಬ್ಬ ಶಿಕ್ಷಕ ಪರಸ್ತ್ರೀ ಜತೆ ಮಲಗಿರುವ ತನ್ನದೇ ಫೋಟೋವನ್ನು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ತಾನೇ ಹಾಕಿ ಪೇಚಿಗೆ ಸಿಲುಕಿದ್ದಾನೆ. ಈ ಫೋಟೋ ಸಖತ್ ವೈರಲ್ ಆಗಿದೆ. ಈತ ಶಿಕ್ಷಕ ಮಾತ್ರವಲ್ಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಗಂಡ ಕೂಡ ಆಗಿದ್ದಾನೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನವಲಿ ಗ್ರಾಮದ ನಿಂಗಪ್ಪ ಫೋಟೋ ಹಾಕಿದವ. ನವಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಗಂಡನಾದ ನಿಂಗಪ್ಪ, ಖಾಸಗಿ ಶಾಲೆಯ ಶಿಕ್ಷಕ. ಮಹಿಳೆ ಜತೆ ಮಂಚದ ಮೇಲೆ ನಿಂಗಪ್ಪ ಮಲಗಿರುವ ಖಾಸಗಿ ದೃಶ್ಯವನ್ನ ಸೆರೆ ಹಿಡಿದು “ನಾಗಪ್ಪ ಸಾಲೋಣಿ ಅಭಿಮಾನಿಗಳ ಬಳಗ’ದ ವಾಟ್ಸ್ಆ್ಯಪ್ ಗ್ರೂಪ್ಗೆ ತಾನೇ ಹಾಕಿದ್ದಾನೆ. ಇದರಿಂದ ಪರಸ್ತ್ರಿ ಸಂಗ ಬಯಲಾಗಿದೆ.