Saturday, December 14, 2024
Homeಕ್ರೀಡೆಪವರ್ ಲಿಪ್ಟಿಂಗ್ ಮತ್ತು ಬೆಂಚ್ ಪ್ರೆಸ್ ಸ್ಪರ್ಧೆ: ದೀಪಾಗೆ ನಾಲ್ಕು ಚಿನ್ನ

ಪವರ್ ಲಿಪ್ಟಿಂಗ್ ಮತ್ತು ಬೆಂಚ್ ಪ್ರೆಸ್ ಸ್ಪರ್ಧೆ: ದೀಪಾಗೆ ನಾಲ್ಕು ಚಿನ್ನ

ಇಸ್ತಾಂಬುಲ್: ಟರ್ಕಿಯಲ್ಲಿ ನಡೆಯುತ್ತಿರುವ ಏಷ್ಯನ್ ಪವರ್ ಲಿಪ್ಟಿಂಗ್ ಮತ್ತು ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಮಾಸ್ಟರ್ ವಿಭಾಗ (76ಕಿಲೊ)ದಲ್ಲಿ ಮಂಗಳೂರಿನ ದೀಪಾ ಕೆ.ಎಸ್. ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ.

ಕ್ಲಾಸಿಕ್ ಪವರ್ ಲಿಪ್ಟಿಂಗ್ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.
ಪವರ್ ಲಿಪ್ಟರ್ ಪ್ರದೀಪ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇವರು ಕುಂಜತ್ತೋಡಿ ವಾಸುದೇವ ಭಟ್ ಕದ್ರಿ ಅವರ ಧರ್ಮಪತ್ನಿ.
ಇವರ ಮಗ ಋತ್ವಿಕ್ ಅಲೆವೂರಾಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಪಡೆದಿದ್ದರು.