Saturday, December 14, 2024
Homeಬೆಂಗಳೂರು ವಿಭಾಗರಾಮನಗರಪಾದಯಾತ್ರೆಗೆ ಮಠಾಧೀಶರ ಬೆಂಬಲ

ಪಾದಯಾತ್ರೆಗೆ ಮಠಾಧೀಶರ ಬೆಂಬಲ

ರಾಮನಗರ: ಮೇಕೆದಾಟು ಪಾದಯಾತ್ರೆಯ ಎರಡನೇ ದಿನವಾದ ಸೋಮವಾರ ವಿವಿಧ ಮಠಾಧೀಶರು ಪಾಲ್ಗೊಂಡು ಬೆಂಬಲ ಸೂಚಿಸಿದರು.

ಚಿತ್ರದುರ್ಗದ ಮುರುಘಾ ಶರಣರ ನೇತೃತ್ವದಲ್ಲಿ ಹತ್ತಾರು ಮಠಾಧೀಶರು ಹೆಜ್ಜೆ ಹಾಕಿದರು.

ಈ ಸಂದರ್ಭ ಮಾತನಾಡಿದ ಮುರುಘಾ ಶರಣರು ‘ ಈ ಕಾಲಘಟ್ಟದಲ್ಲಿ ನೀರಿಗಾಗಿ ಹೋರಾಟ ಎಂಬುದು ಅನಿವಾರ್ಯ ಆಗಿದೆ. ನೀರು ನಮ್ಮೆಲ್ಲರ ಹಕ್ಕು. ಇದಕ್ಕಾಗಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹೋರಾಟ ನಡೆದಿರುವುದು ಶ್ಲಾಘನೀಯ’ ಎಂದರು.

ಸ್ವಾಮಿಗಳಾಗಿ ಸಮಾಜದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು. ಸತ್ಕಾರ್ಯಕ್ಕೆ ಬೆಂಬಲ ನೀಡುವುದು ನಮ್ಮ ಆದ್ಯ ಕರ್ತವ್ಯ. ನಮಗೆ ಯಾವುದೇ ಪ್ರಾದೇಶಿಕ ತಾರತಮ್ಯದ ಭಾವನೆ ಇಲ್ಲ. ಜನರಿಗಾಗಿ ಈ‌ ಯೋಜನೆ ಜಾರಿ ಆಗಲೇ ಬೇಕಿದೆ ಎಂದರು.