Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಪುನೀತ್‌ ಅಭಿಮಾನಿ ಆತ್ಮಹತ್ಯೆ

ಪುನೀತ್‌ ಅಭಿಮಾನಿ ಆತ್ಮಹತ್ಯೆ

ದಾವಣಗೆರೆ: ನಟ ಪುನೀತ್‌ ರಾಜ್‌ಕುಮಾರ್‌ ಮೃತಪಟ್ಟಾಗಿನಿಂದ ಖಿನ್ನರಾಗಿದ್ದ ಯುವಕರೊಬ್ಬರು ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಳೇ ದಾವಣಗೆರೆಯ ವಿಜಯನಗರ ನಿವಾಸಿ ಚಂದ್ರಪ್ಪ ಅವರ ಮಗ ಕುಮಾರ್‌ (25) ಆತ್ಮಹತ್ಯೆ ಮಾಡಿಕೊಂಡವರು. ಪುನೀತ್‌ ಅವರ ಎಲ್ಲ ಚಿತ್ರಗಳನ್ನು ನೋಡಿದ್ದ ಕುಮಾರ್‌, ಇಷ್ದದ ನಟ ನಿಧನರಾದ ನಂತರ ಸರಿಯಾಗಿ ಊಟ ಕೂಡ ಮಾಡುತ್ತಿರಲಿಲ್ಲ. ಟಿ.ವಿಯಲ್ಲಿ ಬರುತ್ತಿದ್ದ ದೃಶ್ಯಗಳನ್ನು ಪದೇ ಪದೇ ನೋಡುತ್ತಿದ್ದರು. ಮಂಗಳವಾರ ಪುನೀತ್‌ ಕುಟುಂಬದವರು ಹಾಲು, ತುಪ್ಪ ಬಿಡುವುದನ್ನು ಕೂಡ ಹಲವು ಬಾರಿ ನೋಡಿದ್ದರು. ಚಂದ್ರಪ್ಪ ಅವರ ಮಗಳನ್ನು ಹರಪನಹಳ್ಳಿ ತಾಲ್ಲೂಕಿನ ನಂದಿಬೇವೂರಿಗೆ ಮದುವೆ ಮಾಡಿ ಕೊಡಲಾಗಿತ್ತು. ಅಲ್ಲಿ ಪೂಜೆ ಇದೆ ಎಂದು ಚಂದ್ರಪ್ಪ ಮತ್ತು ಅವರ ಪತ್ನಿ ಮಂಗಳವಾರ ಹೋಗಿ ಸಂಜೆ ವಾಪಸ್ಸಾಗಿದ್ದರು. ಈ ಮಧ್ಯೆ ಕುಮಾರ್ ನೇಣು ಹಾಕಿಕೊಂಡಿದ್ದಾರೆ ಎಂದು ಕುಮಾರ್‌ ಅವರ ದೊಡ್ಡಪ್ಪನ ಮಗ ಸುನೀಲ್‌ ತಿಳಿಸಿದ್ದಾರೆ.

ತಂದೆ, ತಾಯಿ, ಇಬ್ಬರು ಸಹೋದರಿಯರು ಇದ್ದಾರೆ.