Monday, May 19, 2025
Homeರಾಜ್ಯಮಲೆನಾಡು ಕರ್ನಾಟಕಪೋಷಕರಿಂದ ತಪ್ಪಿಸಿಕೊಂಡಿದ್ದ ಬಾಲಕಿ ಪತ್ತೆ

ಪೋಷಕರಿಂದ ತಪ್ಪಿಸಿಕೊಂಡಿದ್ದ ಬಾಲಕಿ ಪತ್ತೆ


ಚಿಕ್ಕಮಗಳೂರು: ನಗರದ ಎಂ.ಜಿ ರಸ್ತೆಯಲ್ಲಿ ಪೋಷಕರಿದ ತಪ್ಪಿಸಿಕೊಂಡಿದ್ದ
ಐದು ವರ್ಷದ ಬಾಲಕಿಯನ್ನು ಪೊಲೀಸರು 45 ನಿಮಿಷಗಳಲ್ಲಿ ಪತ್ತೆ ಹಚ್ಚಿದ್ದಾರೆ.
ಶುಕ್ರವಾರ ಮಧ್ಯಾಹ್ನ ರಸ್ತೆಯಲ್ಲಿ ಸಾಗುವಾಗ ಬಾಲಕಿಯು ಪೋಷಕರಿಂದ ತಪ್ಪಿಸಿಕೊಂಡಿದ್ದಾಳೆ. ತಕ್ಷಣವೇ ಪೋಷಕರು 112 ಸಹಾಯವಾಣಿಗೆ ಕರೆ ಮಾಡಿದ್ದಾರೆ.
ಬಾಲಕಿಯ ಚಹರೆ, ಧರಿಸಿದ್ದ ಬಟ್ಟೆ ಇತ್ಯಾದಿ ವಿವರ ಪಡೆದ ಪೊಲೀಸ್‌ ತಂಡವು ಹುಡುಕಾಟ ಆರಂಭಿಸಿದೆ. ನಗರದ ಹೊಸಮನೆ ಬಡಾವಣೆಯಲ್ಲಿ ಬಾಲಕಿ ಪತ್ತೆಯಾಗಿದ್ದು, ತಕ್ಷಣವೇ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಮಲ್ಲೇಶಪ್ಪ, ದರ್ಶನ್, ಬಸವರಾಜು ಕಾರ್ಯಾಚರಣೆ ತಂಡದಲ್ಲಿದ್ದರು.