Monday, May 19, 2025
Homeಸುದ್ದಿರಾಜ್ಯಪ್ರಧಾನಿಯನ್ನು ಭೇಟಿಯಾದ - ಎಚ್ ಡಿ ದೇವೇಗೌಡ: ಭಾರಿ ಗೌರವ ನೀಡಿದ ಮೋದಿ

ಪ್ರಧಾನಿಯನ್ನು ಭೇಟಿಯಾದ – ಎಚ್ ಡಿ ದೇವೇಗೌಡ: ಭಾರಿ ಗೌರವ ನೀಡಿದ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು. ಮಣ್ಣಿನ ಮಗನಿಗೆ ಮೋದಿ ನೀಡಿದ ಭಾರಿ ಗೌರವದ ನಡವಳಿಕೆ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿ ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ದೇವೇಗೌಡರ ಭೇಟಿಯ ಕುರಿತು ಫೋಟೊಗಳನ್ನು ಹಂಚಿಕೊಂಡಿದ್ದು, ಸಂಸತ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಇಂದು ಭೇಟಿಯಾದೆ ಎಂದು ತಿಳಿಸಿದ್ದಾರೆ.

ಅಧಿವೇಶನದ ಎರಡನೇ ದಿನ ಉಭಯ ನಾಯಕರ ಭೇಟಿ ಹಲವು ಕೋನಗಳ ಚರ್ಚೆಗೆ ಕಾರಣವಾಗಿದೆ.