Saturday, December 14, 2024
Homeಮಧ್ಯ ಕರ್ನಾಟಕಚಿತ್ರದುರ್ಗಪ್ರಿಯತಮನ ಮನೆಯಲ್ಲಿ ವಿವಾಹಿತೆ ಆತ್ಮಹತ್ಯೆ

ಪ್ರಿಯತಮನ ಮನೆಯಲ್ಲಿ ವಿವಾಹಿತೆ ಆತ್ಮಹತ್ಯೆ

ಚಿತ್ರದುರ್ಗ: ವಿವಾಹಿತ ಮಳೆಯೊಬ್ಬರು ಪ್ರಿಯತಮನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲಾಪುರದಲ್ಲಿ ಭಾನುವಾರ ನಡೆದಿದೆ.

ಮಲ್ಲಾಪುರದ ಲಕ್ಷ್ಮಿ (25) ಮೃತ ಮಹಿಳೆ. ಹೇಮಂತ್‌ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ತಾಯಿ ದೂರು ದಾಖಲಿಸಿದ್ದಾರೆ.

ಲಕ್ಷ್ಮಿ ಅವರು ಎಂಟು ವರ್ಷಗಳ ಹಿಂದೆ ಚಾಲಕರೊಬ್ಬರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ–‍ಪತ್ನಿ ನಡುವೆ ಗಲಾಟೆ ಉಂಟಾಗಿ ವರ್ಷದ ಹಿಂದಿನಿಂದ ಪ್ರತ್ಯೇಕವಾಗಿದ್ದರು. ಈ ನಡುವೆ ಲಕ್ಷ್ಮಿ ಅವರು ಹೇಮಂತ್‌ ಎಂಬುವರೊಂದಿಗೆ ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಹೇಮಂತ್‌ ಹಾಗೂ ಲಕ್ಷ್ಮಿ ನಡುವೆ ಕಲಹ ಉಂಟಾಗಿದೆ. ಶೀಲ ಶಂಕಿಸಿದ ಪ್ರಿಯಕರನೊಂದಿಗೆ ಮಹಿಳೆ ಗಲಾಟೆ ಮಾಡಿಕೊಂಡಿದ್ದರು. ತವರು ಮನೆಯಲ್ಲಿ ದಸರಾ ಹಬ್ಬ ಮುಗಿಸಿ ಅ.16ರಂದು ಮರಳಿದ ಮಹಿಳೆ, ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.