ಹಾಲಿವುಡ್: ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನಿಂದ ಪತಿ ಜೋನಾಸ್ ಹೆಸರನ್ನು ಕೈಬಿಟ್ಟಿದ್ದ ಪ್ರಿಯಾಂಕಾ ಚೋಪ್ರಾ ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಪ್ರಿಯಾಂಕ ಚೋಪ್ರಾ ಮತ್ತು ಪಾಪ್ ಸ್ಟಾರ್ ಪತಿ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಗಾಳಿಸುದ್ದಿಗಳು ಹರಿದಾಡಿದ್ದವು.
ಪ್ರಿಯಾಂಕಾ ಆಪ್ತವಲಯದವರನ್ನು ಈ ಕುರಿತಾಗಿ ಪ್ರಶ್ನಿಸಿದಾಗ ಅವರು ಡೈವೊರ್ಸ್ ಶಂಕೆಗಳನ್ನು ತಳ್ಳಿಹಾಕಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಹೆಸರಿನಿಂದ ಪತಿಯ ಹೆಸರನ್ನು ಕೈಬಿಟ್ಟಿದ್ದಾರೆಯೇ ಹೊರತು ತಮ್ಮ ಬದುಕಿನಿಂದಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಮುಂದೆ ಸಾಲು ಸಾಲಾಗಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು ಹಾಗೂ ಮತ್ತಿತರ ಕಾರ್ಯಕ್ರಮಗಳ ಪ್ರಚಾರ ಕಾರ್ಯಗಳಿಗೆ ಸಹಾಯವಾಗುವ ದೃಷ್ಟಿಯಿಂದ ಆವರು ಜೋನಾಸ್ ಹೆಸರನ್ನು ಕೈಬಿಟ್ಟಿರುವುದಾಗಿ ಸ್ಪಷ್ಟೀಕರನ ಪೀಸೀ ಅವರ ಆಪ್ತ ವಲಯದವರಿಂದ ಕೇಳಿಬಂದಿದೆ.