Saturday, December 14, 2024
Homeಮಧ್ಯ ಕರ್ನಾಟಕತುಮಕೂರುಬಸ್- ಕಾರ್ ಮಧ್ಯೆ ಅಪಘಾತ: 3 ಮಂದಿ ಸಾವು 

ಬಸ್- ಕಾರ್ ಮಧ್ಯೆ ಅಪಘಾತ: 3 ಮಂದಿ ಸಾವು 

ತುಮಕೂರು: ಕೆಎಸ್ಆರ್ ಟಿಸಿ ಬಸ್ ಮತ್ತು ಕಾರ್ ಮಧ್ಯೆ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ತಿಪಟೂರು ತಾಲ್ಲೂಕಿನ ತಿಮ್ಲಾಪುರ- ಮತ್ತೀಹಳ್ಳಿ ಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.

ಮೃತರು ಶಿರಾ ಸಮೋಪದ ಕಡವಗೆರೆ ನಿವಾಸಿಗಳು ಎಂದು ತಿಳಿದು ಬಂದಿದೆ. ಕಾರ್ ನಲ್ಲಿದ್ದ ನಾಲ್ಕು ಜನರಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿದ್ದಾರೆ. ಧರ್ಮಸ್ಥಳಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.

ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮತ್ತು ಎದುರಿಗೆ ಬರುತ್ತಿದ್ದ ಕಾರ್ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ.