Saturday, December 14, 2024
Homeಮಲೆನಾಡು ಕರ್ನಾಟಕಚಿಕ್ಕಮಗಳೂರುಬಸ್ ನಲ್ಲಿ ಹೃದಯಾಘಾತ: ನಿರ್ವಾಹಕ ಸಾವು

ಬಸ್ ನಲ್ಲಿ ಹೃದಯಾಘಾತ: ನಿರ್ವಾಹಕ ಸಾವು

ಚಿಕ್ಕಮಗಳೂರು: ಬಸ್ ನಲ್ಲಿ ಹೃದಯಾಘಾತವಾಗಿ ಕೆಎಸ್ಆರ್ಟಿಸಿ ನಿರ್ವಾಹಕ ವಿಜಯ ಕುಮಾರ್ (42) ಮೃತಪಟ್ಟಿದ್ದಾರೆ.
ವಿಜಯಕುಮಾರ್ ಅವರು ಸಖರಾಯಪಟ್ಟಣ ಬಳಿ ಕುನ್ನಾಳು ಗ್ರಾಮದವರು.
‘ನಗರ ನಿಲ್ದಾಣದಿಂದ ಬೆಳಿಗ್ಗೆ
6 ಗಂಟೆಗೆ ಉಡುಪಿಗೆ ಹೊರಟಿತ್ತು. ಕೊಟ್ಟಿಗೆಹಾರ ಬಳಿ ಸಾಗುವಾಗ ನಿರ್ವಾಹಕ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಚಾಲಕ ಮತ್ತು ಕೊಟ್ಟಿಗೆಹಾರ ನಿಲ್ದಾಣ ನಿರೀಕ್ಷಕ ಬಣಕಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಮೂಡಿಗೆರೆ ಆಸ್ಪತ್ರೆಗೆ ಒಯ್ದಿದ್ದಾರೆ. ಅಲ್ಲಿ ಅವರು ಮೃತಪಟ್ಟಿದ್ದಾರೆ’ ಎಂದು ಚಿಕ್ಕಮಗಳೂರು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ಟಿ. ವೀರೇಶ್ ತಿಳಿಸಿದ್ದಾರೆ.