Saturday, December 14, 2024
Homeರಾಜ್ಯಉತ್ತರ ಕರ್ನಾಟಕಬಸ್-ಬೈಕ್ ಢಿಕ್ಕಿ: ಇಬ್ಬರ ಸಾವು

ಬಸ್-ಬೈಕ್ ಢಿಕ್ಕಿ: ಇಬ್ಬರ ಸಾವು

ಮುದ್ದೆಬಿಹಾಳ: ತಾಲ್ಲೂಕಿನ ಜೈನಾಪುರ ಕ್ರಾಸ್‌ ಬಳಿ ಬುಧವಾರ ಶಾಲಾ ವಾಹನ ಹಾಗೂ ಬೈಕ್ ಮಧ್ಯೆ ಢಿಕ್ಕಿಯಾಗಿ ಚವನಬಾವಿ ಗ್ರಾಮದ ಶಿವಪ್ಪ ಹಣಮಪ್ಪ ಪೂಜಾರಿ(30) ಹಾಗೂ ಸಂಗಪ್ಪ ಬಸಪ್ಪ ಪೂಜಾರಿ(40) ಸಾವನ್ನಪ್ಪಿದ್ದಾರೆ.

ಚವನಬಾವಿ ರೇವಣಸಿದ್ದೇಶ್ವರ ಪ್ರಾಥಮಿಕ ಶಾಲೆಯ ವಾಹನ ವಿದ್ಯಾರ್ಥಿಗಳನ್ನು ತುಂಬಿಕೊಂಡು ನಾಲತವಾಡದಿಂದ ಚವನಬಾವಿ ಗ್ರಾಮದ ಶಾಲೆಯ ಕಡೆಗೆ ಬರುತ್ತಿತ್ತು.

ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ, ಪಿಎಸ್ಸೈ ರೇಣುಕಾ ಜಕನೂರ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ಶಿವಪ್ಪ ಪೂಜಾರಿ ತಾಯಿ ಸೋಮವ್ವ ಮುದಕಪ್ಪ ಪೂಜಾರಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೃತರ ಕುಟುಂಬದವರನ್ನು ಮುದ್ದೇಬಿಹಾಳ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಭೇಟಿಯಾದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಎರಡೂ ಕುಟುಂಬಕ್ಕೆ ತಲಾ ₹ 50 ಸಾವಿರ ವೈಯಕ್ತಿಕ ಪರಿಹಾರ ನೀಡುವುದಾಗಿ ಹೇಳಿದರು.