Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಬಾಣಂತಿಗೆ ಕಚ್ಚಿದ ಹುಚ್ಚು ನಾಯಿ

ಬಾಣಂತಿಗೆ ಕಚ್ಚಿದ ಹುಚ್ಚು ನಾಯಿ

ದಾವಣಗೆರೆ: ನ್ಯಾಮತಿ ಪಟ್ಟಣದಲ್ಲಿ ಹುಚ್ಚುನಾಯಿ ಹಾವಳಿ ಮುಂದುವರಿದಿದ್ದು, ಬುಧವಾರ ಮತ್ತಿಬ್ಬರಿಗೆ ಕಚ್ಚಿ ಗಾಯಗೊಳಿಸಿದೆ.

ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿ ಮನೆಯ ಎದುರು ನಿಂತಿದ್ದ ಪಟ್ಟಣ ಪಂಚಾಯಿತಿ ನೌಕರ ನಾಗಪ್ಪ ಅವರ ಮಗಳು 4 ತಿಂಗಳ ಬಾಣಂತಿಯ ಎರಡೂ ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ನಂತರ ಎಚ್. ಶಿವಾನಂದಪ್ಪ ಬಡಾವಣೆಯ ದಾರಿ ಹೋಕರೊಬ್ಬರಿಗೆ ಕಚ್ಚಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಹುಚ್ಚು ಹಿಡಿದ ನಾಯಿ ನೀರು, ಆಹಾರ ಸೇವಿಸದೇ ಓಡುತ್ತಿರುತ್ತದೆ. ದಾರಿ ಹೋಕರು ಮತ್ತು ಇತರ ನಾಯಿಗಳು ಕಂಡರೆ ಅದಕ್ಕೆ ಹುಚ್ಚು ಕೆರಳುತ್ತದೆ. ನೀರು, ಆಹಾರ ಇಲ್ಲದೇ ಕ್ರಮೇಣ ಒಂದು ವಾರದೊಳಗೆ ನಿತ್ರಾಣಗೊಂಡು ಸಾಯುತ್ತದೆ ಎಂದು ಪಶು ಆಸ್ಪತ್ರೆಯ ಹಿರಿಯ ಪಶು ಚಿಕಿತ್ಸಕ ಎಸ್.ಎಚ್. ಮಲ್ಲೇಶಪ್ಪ ತಿಳಿಸಿದರು. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.