Saturday, December 14, 2024
Homeರಾಜ್ಯಕಾರವಾರಬಾಲಕನನ್ನು ಎಳೆದೊಯ್ದ ಮೊಸಳೆ: ಮುಂದುವರಿದ ಶೋಧ

ಬಾಲಕನನ್ನು ಎಳೆದೊಯ್ದ ಮೊಸಳೆ: ಮುಂದುವರಿದ ಶೋಧ

ದಾಂಡೇಲಿ: ಕಾಳಿ ನದಿಯಲ್ಲಿ ರವಿವಾರ ಮೀನು ಹಿಡಿಯಲು ಹೋದ ಬಾಲಕನನ್ನು ಮೊಸಳೆ ಎಳೆದು ಕೊಂಡು ಹೋಗಿದ್ದು ಆತನಿಗಾಗಿ ಪತ್ತೆಗಾಗಿ ಕಾರ್ಯಾಚರಣೆಯು ಸೋಮವಾರವು ಮುಂದುವರಿದಿದೆ.

ದಾಂಡೇಲಿಯ ವಿನಾಯಕ ನಗರದ ಸಮೀಪವಿರುವ ಕಾಳಿ ನದಿಯಲ್ಲಿ ಮೊಹೀನ್ ಮೊಹಮ್ಮದ್ ಗುಲ್ಬರ್ಗ (15) ರವಿವಾರ ಮೀನ ಹಿಡಿಯಲು ಹೋದ ಬಾಲಕ ಮೊಸಳೆ ದಾಳಿ ಒಳಗಾಗಿದ್ದು ಪತ್ತೆ ಶೋಧಕಾರ್ಯ ಮುಂದುವರಿದಿದೆ.

ಸ್ಥಳದಲ್ಲಿ ತಾಲೂಕಾಡಳಿತ, ಅರಣ್ಯ ಇಲಾಖೆ ಸಿಬ್ಬಂದಿ, ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಕಾರ್ಯಾಚರಣೆ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ರವಿವಾರ ಕಾರ್ಯಾಚರಣೆಗೆ 8 ಬೋಟಗಳನ್ನು ಬಳಸಲಾಗಿತ್ತು.ಸೋಮವಾರ ಮತ್ತೆ ಎರಡು ಹೆಚ್ಚುವರಿ ದೊಡ್ಡ ಬೋಟಗಳನ್ನು ತರಸಲಾಗಿದ್ದು ಒಟ್ಟು 10 ಬೋಟ್ ಗಳು ಸೇರಿದಂತೆ 11 ತೆಪ್ಪಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತದೆ.ಗಣೇಶ ಗುಡಿಯ ಮುಳುಗು ತಜ್ಞ ಶೋಧ ಕಾರ್ಯ ತೊಡಗಿದ್ದಾರೆ ಇದಕ್ಕೆ ಸ್ಥಳೀಯರ ಸಹಕಾರ ಇದೆ.

ಸ್ಥಳದಲ್ಲಿ ಬೀಡು ಬಿಟ್ಟ ತಾಲೂಕಾಡಳಿತ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆ:

ರವಿವಾರ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ತಾಲೂಕಾಡಳಿತ ಸ್ಥಳದಲ್ಲಿ ಇದ್ದ ತಹಶೀಲ್ದಾರ ಶೈಲೇಶ ಪರಮಾನಂದ ಅವರನ್ನು ಪ್ರಜಾವಾಣಿ ಮಾತನಾಡಿಸಿದಾಗ ಸತತ ಎರಡು ದಿನಗಳಿಂದ ಎಲ್ಲಾ ಇಲಾಖೆಗಳ ಹಾಗು ರಾಫ್ಟಿಂಗ್ ತಂಡವು ಶೋಧ ಕಾರ್ಯದಲ್ಲಿ ನಿರಂತರವಾಗಿದೆ. ಬಾಲಕನ ಪತ್ತೆಗಾಗಿ ತಾಲೂಕಾಡಳತವು ಎಲ್ಲಾ ರೀತಿಯಲ್ಲೂ ಪ್ರಯತ್ನ ಮುಂದುವರಿಸಿದೆ.

ಡಿವೈಎಸ್ಪಿ ಕೆ ಎಲ್ ಗಣೇಶ ಸೂಪಾ ಡ್ಯಾಂ ನೀರಿನ ಹರಿಯು ಸಂಪೂರ್ಣ ಕಡಿಮೆ ಆಗಿದ್ದು 10 ಬೋಟ್ ಗಳು,ಮುಳುಗು ತಜ್ಞರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಸಂಜೆವರೆಗೂ ಬಾಲಕ ಸಿಗಬಹುದು ಎನ್ನುವ ಭರವಸೆ ಇದೆ ಎನ್ನುತ್ತಾರೆ.

ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ,ಉಪಾಧ್ಯಕ್ಷ ಸಂಜಯ ನಂದ್ಯಾಳಕ,ನಗರಸಭೆಯ ಸದಸ್ಯರಾದ ಪ್ರೀತಿ ನಾಯರ್ ಸೇರಿದಂತೆ ನಗರಸಭೆಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ.

ಬಾಲಕನ ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ: ಮೊಸಳೆ ದಾಳಿ ಒಳಗಾಗಿದ್ದು ಬಾಲಕನ ಮನೆಯಲ್ಲಿ ಹೆತ್ತವರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿನಾಯಕ ನಗರದ ಅಲೈಡ್ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮೊಹಮ್ಮದ್ ಗುಲ್ಬರ್ಗ ಅವರು ಆಟೋ ಚಾಲಕನಾಗಿದ್ದು.ಮೊಸಳೆಯ ದಾಳಿಗೆ ಬಲಿಯಾದ ಮೊಹೀನ್ ಮೊಹಮ್ಮದ್ ಗುಲ್ಬರ್ಗ ಹಿರಿಯ ಮಗನಾದ ಇವನು ಹುಬ್ಬಳ್ಳಿಯಲ್ಲಿ ಮದರಸಾ ದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದು ಕೋವಿಡ್ ಕಾರಣ ಊರಿಗೆ ಬಂದಾಗ ಈ ಘಟನೆ ನಡೆದಿದೆ. ತಂಗಿಯಾದ ಅತ್ತಿಮ್ಮಾಬಾ, ತಮ್ಮನಾದ ಮೊಹಮ್ಮದ್ ರಫಿ ತಾಯಿ ಸೇರಿದಂತೆ ಹಾಗೂ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿದೆ.