ಬೆಂಗಳೂರು: ಪ್ರೀತಿಯ ನಾಟಕವಾಡಿ ಬಾಲಕಿಯರನ್ನು ಅಪಹರಿಸಿದ್ದ ಆರೋಪಿಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಆರೀಫ್ (19) ಹಾಗೂ ವಾಹೀದ್ (19) ಬಂಧಿತರು.
‘ನಗರದಲ್ಲಿ ಸೋಫಾ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದ ಆರೋಪಿಗಳು ಯಶವಂತಪುರದಲ್ಲಿ ನೆಲೆಸಿದ್ದ ಬಾಲಕಿಯರೊಂದಿಗೆ ಸ್ನೇಹ ಬೆಳೆಸಿದ್ದರು. ಬಳಿಕ ಪ್ರೀತಿಯ ನಾಟಕವಾಡಿ ಅವರನ್ನು ಅಪಹರಿಸಿದ್ದರು. ಬಾಲಕಿಯರ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.