Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಬೈಕ್ ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

ಬೈಕ್ ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚನ್ನಗಿರಿ ತಾಲ್ಲೂಕು ಕೋಟೆಹಾಳ್ ಗ್ರಾಮದ ಮಹೇಶಪ್ಪ (50) ಹಾಗೂ ಅವರ ಪುತ್ರ ಸಂಜು (19) ದಿಡಗೂರು ಹರಳಹಳ್ಳಿ ಗ್ರಾಮದ ಪ್ರಶಾಂತ್ ಮೃತರು.

ಆನಂದ್ ಎಂಬುವರಿಗೆ ತೀವ್ರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ದೇವರಹೊನ್ನಾಳಿ – ತಕ್ಕನಹಳ್ಳಿ ಗ್ರಾಮಗಳ ನಡುವೆ ಬಸವಾಪಟ್ಟಣ ಸವಳಂಗ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.

ಆನಂದ್ ಸ್ವಗ್ರಾಮ ದಿಡಗೂರಿನತ್ತ ಬೈಕ್ ನಲ್ಲಿ ಪ್ರಯಾಣ ಬೆಳೆಸಿದ್ದರು.
ಇನ್ನೊಂದು ಬೈಕ್ ನಲ್ಲಿ ಕೋಟೆಹಾಳ್ ಗ್ರಾಮದ ಮಹೇಶಪ್ಪ ಹಾಗೂ ಸಂಜು ಬರುತ್ತಿದ್ದಾಗ ಅಪಘಾತವಾಗಿದೆ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.