ಚಿಕ್ಕಮಗಳೂರು: ಜಿಲ್ಲೆಯ ಕಳಸ ಬಳಿ ಭದ್ರಾ ನದಿಯಲ್ಲಿ ಇದೇ 1ರಂದು ನೀರುಪಾಲಾಗಿದ್ದ ಬೆಂಗಳೂರಿನ ವೈದ್ಯ ಡಾ.ರುದ್ರೇಶ್ (35) ಅವರ ಮೃತದೇಹ ಪತ್ತೆಯಾಗಿದೆ.
ಹಳುವಳ್ಳಿ ಸಮೀಪ ನದಿಯಲ್ಲಿ ಬುಧವಾರ ಸಿಕ್ಕಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡ, ಕುಶಾಲನಗರದ ರ್ಯಾಫ್ಟಿಂಗ್ ತಂಡ, ಪೊಲೀಸರು, ಸ್ಥಳೀಯರು ಸತತ ಮೂರು ದಿನ ಕಾರ್ಯಾಚರಣೆ ನಡೆಸಿ ಶವ ಪತ್ತೆ ಮಾಡಿದ್ದಾರೆ.
‘ರುದ್ರೇಶ್ ಅವರು ಕೆಂಗೇರಿಯವರು. ಸ್ನೇಹಿತರೊಂದಿಗೆ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದರು. ನದಿ ಬಳಿ ತೆರಳುವಾಗ ನೀರು ಪಾಲಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.