Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಮನೆಗೆ ಬರಲು ಒಪ್ಪದ ಪತ್ನಿ: ಪತಿ ಆತ್ಮಹತ್ಯೆ

ಮನೆಗೆ ಬರಲು ಒಪ್ಪದ ಪತ್ನಿ: ಪತಿ ಆತ್ಮಹತ್ಯೆ

ದಾವಣಗೆರೆ: ಹಬ್ಬಕ್ಕೆ ಕರೆದುಕೊಂಡು ಹೋಗಲು ಬಂದರೂ ಪತ್ನಿ ಬರಲು ಒಪ್ಪದ ಕಾರಣ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ವಿಚಾರದಲ್ಲಿ ಎರಡೂ ಮನೆಯವರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಹೊಡೆದಾಡಿಕೊಂಡಿದ್ದಾರೆ.

ಹಳವುದರ ಲಂ‌ಬಾಣಿಹಟ್ಟಿಯ ಶಿವನಾಯ್ಕ್‌ (37) ಆತ್ಮಹತ್ಯೆ ಮಾಡಿಕೊಂಡವರು. ಕುಡಿತದ ಚಟ ಹೊಂದಿದ್ದ ಶಿವನಾಯ್ಕ್‌ ಜತೆ ಜಗಳ ಉಂಟಾಗಿದ್ದರಿಂದ ಅವರ ಪತ್ನಿ ರೂಪಾಬಾಯಿ ಮಕ್ಕಳ ಜತೆಗೆ ನಾಗರಕಟ್ಟೆಯಲ್ಲಿರುವ ತವರು ಮನೆ ಸೇರಿದ್ದರು.

ದೀಪಾವಳಿ ಹಬ್ಬಕ್ಕೆ ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಲು ನಾಗರಕಟ್ಟೆಗೆ ಶಿವನಾಯ್ಕ ಬಂದಿದ್ದರು. ಆದರೆ ರೂಪಾಬಾಯಿ ಬರಲು ಒಪ್ಪದ ಕಾರಣ ಜಗಳವಾಗಿದ್ದರಿಂದ ಶಿವನಾಯ್ಕ್ ವಿಷ ಕುಡಿದಿದ್ದರು. ಅವರನ್ನು ಆಸ್ಪತ್ರೆಗೆ ಒಯ್ದಿದ್ದರೂ ಮೃತಪಟ್ಟಿದ್ದರು.

ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಿವನಾಯ್ಕ್ ಕಡೆಯವರು ಆರೋಪಿಸಿದ್ದರಿಂದ ಅವರ ಮತ್ತು ರೂಪಾಬಾಯಿ ಕಡೆಯವರ ನಡುವೆ ಇದೇ ವಿಚಾರಕ್ಕೆ ಶವಾಗಾರದ ಮುಂದೆಯೇ ಮಾತಿನ ಚಕಮಕಿ, ಹೊಡೆದಾಟ ನಡೆಯಿತು. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಕೋಪಕ್ಕೆ ಹೋಗದಂತೆ
ತಡೆದರು.