Saturday, December 14, 2024
Homeರಾಜ್ಯಬೆಂಗಳೂರು ವಿಭಾಗಮಳೆಗೆ ಸೇತುವೆ ಕುಸಿತ

ಮಳೆಗೆ ಸೇತುವೆ ಕುಸಿತ

ರಾಮನಗರ: ನಿರಂತರ ಮಳೆಯಿಂದಾಗಿ ತಾಲ್ಲೂಕಿನ ಮೆಳೆಹಳ್ಳಿ ಬಳಿ ಸಂಪರ್ಕ ಸೇತುವೆ ಕುಸಿದಿದೆ.ಮೆಳೆಹಳ್ಳಿ, ಜೋಗಿದೊಡ್ಡಿ ಸೇರಿದಂತೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಇದಾಗಿತ್ತು. ಭಾನುವಾರ ರಾತ್ರಿ ಹಳ್ಳದ ಪ್ರವಾಹದಲ್ಲಿ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಈ ಗ್ರಾಮಗಳ ಜನರ‌ ಓಡಾಟಕ್ಕೆ ತೊಂದರೆ ಆಗಿದೆ.