ಶಿವಮೊಗ್ಗ: ಮಹಡಿಯಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ನಗರ ಚಿಕ್ಕಪೇಟೆ ಸರ್ಕಲ್ ನಲ್ಲಿ ಭಾನುವಾರ ನಡೆದಿದೆ.
ಮುಂಡಳ್ಳಿ ನಿವಾಸಿ ರಾಜು ಶೆಟ್ಟಿ(68) ಮೃತ ವ್ಯಕ್ತಿ. ಚಿಕ್ಕಪೇಟೆ ಸರ್ಕಲ್ ನಲ್ಲಿ ಕ್ಷೌರ ಮಾಡಿಸಲು ಮಹಡಿ ಮೇಲೆ ಹೋಗುವಾಗ ಕಾಲುಜಾರಿ 12 ಅಡಿ ಕೆಳಗೆ ಬಿದ್ದಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.