ವಿಜಯಪುರ: ಪಂಚಮಸಾಲಿ ಸಮಾಜಕ್ಕೆ ಸೇರಿದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಅರವಿಂದ ಬೆಲ್ಲದ ಮತ್ತು ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ತಪ್ಪಿಸಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕ ಧಿಕ್ಕಾರ ಹಾಕಿದೆ.
ಈ ಸಂಬಂಧ ಸಾಮಾಜಿಕ ಸಾಲತಾಣದಲ್ಲಿ ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕದ ಮುಖಂಡ ಹೇಮಂತ ಪಾಟೀಲ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಮಸಾಲಿಗಳಿಗೆ 2 ಎ ಮೀಸಲಾತಿ ಕೊಡದೇ ಮೋಸ ಮಾಡಿದ, ಸಿಎಂ ಸ್ಥಾನ ತಪ್ಪಿಸಿದ ಬಿಎಸ್ ವೈ ಅವರಿಗೆ ಪಂಚಮ ಸಾಲಿ ಸಮಾಜದಿಂದ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.