Saturday, December 14, 2024
Homeಬೆಂಗಳೂರು ವಿಭಾಗರಾಮನಗರಮೇಕೆದಾಟು: ಎರಡನೇ ದಿನದ ಪಾದಯಾತ್ರೆ ಆರಂಭ

ಮೇಕೆದಾಟು: ಎರಡನೇ ದಿನದ ಪಾದಯಾತ್ರೆ ಆರಂಭ

ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯು ಎರಡನೇ ದಿನವಾದ ಸೋಮವಾರ ದೊಡ್ಡಾಲಹಳ್ಳಿಯಿಂದ ಆರಂಭ ಆಯಿತು.

ಡಿ.ಕೆ. ಶಿವಕುಮಾರ್ ಅವರ ಸ್ವಗ್ರಾಮವೂ ಆದ ದೊಡ್ಡಾಲಹಳ್ಳಿಯಿಂದ ಕನಕಪುರ ಕಡೆಗೆ ಪಾದಯಾತ್ರಿಗರು ಹೆಜ್ಜೆ ಇಟ್ಟಿದ್ದು, ಕಾಂಗ್ರೆಸ್ ನ‌ ಅನೇಕ ನಾಯಕರು ಸಾಥ್ ನೀಡಿದ್ದಾರೆ. ಈ ದಿನ ಒಟ್ಟು 15 ಕಿ.ಮೀ. ಕ್ರಮಿಸಲಿದ್ದಾರೆ.

ಸಿದ್ದರಾಮಯ್ಯ ಭಾಗಿ: ‘ ಸೋಮವಾರದ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಸಹ ಭಾಗಿ ಆಗಲಿದ್ದಾರೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ’ ಎಂದು ಶಿವಕುಮಾರ್ ದೊಡ್ಡಾಲಹಳ್ಳಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.