Monday, May 19, 2025
Homeಮೈಸೂರು ವಿಭಾಗಮೈಸೂರುಮೈಸೂರು; ಕಾರ್ಖಾನೆಯಲ್ಲಿ ಬೆಂಕಿ

ಮೈಸೂರು; ಕಾರ್ಖಾನೆಯಲ್ಲಿ ಬೆಂಕಿ

ಮೈಸೂರು: ಇಲ್ಲಿನ ಅಶೋಕಪುರಂ ರೈಲು ನಿಲ್ದಾಣದ ಹಿಂಭಾಗ ಇರುವ ಥರ್ಮಾಕೋಲ್‌ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ.

4 ಅಗ್ನಿಶಾಮಕ ವಾಹನಗಳಲ್ಲಿ ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ, ಕಾರ್ಖಾನೆಯೊಳಗೆ ಕಾರ್ಮಿಕರು ಸಿಲುಕಿಲ್ಲ. ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲರೂ ಹೊರ ಬಂದಿದ್ದಾರೆ. ಥರ್ಮಾಕೋಲ್‌ ಹಾಗೂ ಅದಕ್ಕೆ ಸಂಬಂಧಿಸಿದ ದಹ್ಯ ವಸ್ತುಗಳು ಸುಟ್ಟು ಹೋಗಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ ಎಂದು ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತಿಳಿಸಿದರು.

ಸರಸ್ವತಿಪುರಂ ಅಗ್ನಿಶಾಮಕ ಠಾಣೆಯಿಂದ 2, ಬನ್ನಿಮಂಟಪ ಹಾಗೂ ಹೆಬ್ಬಾಳ ಠಾಣೆಗಳಿಂದ ತಲಾ ಒಂದೊಂದು ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ