Saturday, December 14, 2024
Homeಮೈಸೂರು ವಿಭಾಗಮೈಸೂರುಮೈಸೂರು ‘ಮಹಾರಾಜ’ರ ಮಾತು ಕೇಳಿ ಟಿಕೆಟ್‌ ತಪ್ಪಿಸಿದರು: ಸಂದೇಶ್ ನಾಗರಾಜ್

ಮೈಸೂರು ‘ಮಹಾರಾಜ’ರ ಮಾತು ಕೇಳಿ ಟಿಕೆಟ್‌ ತಪ್ಪಿಸಿದರು: ಸಂದೇಶ್ ನಾಗರಾಜ್

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ಕೈತಪ್ಪಲು ‘ಮೈಸೂರು ಮಹಾರಾಜರು’ ಕಾರಣ ಎಂದು ಶಾಸಕರ ಹೆಸರು ಹೇಳದೇ ಸಂದೇಶ್ ನಾಗರಾಜ್ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್, ಜೆಡಿಎಸ್ ಮುಖ್ಯಸ್ಥ ಎಚ್.ಡಿ ದೇವೇಗೌಡ ಮತ್ತು ಎಚ್.ಡಿ ರೇವಣ್ಣ ನನ್ನ ಮನೆಗೆ ಬಂದು ಬಿ. ಫಾರಂ ನೀಡಿದ್ದರು ನಾಯಕರೇ ನನ್ನ ಮನೆಗೆ ಬಂದು ಬಿ ಫಾರ್ಮ್ ಕೊಟ್ಟು ಹೋಗಿದ್ದರು.

ಆದರೆ ಅಪ್ಪ-ಮಗ ಕಿತ್ತಾಡಿಕೊಂಡು ನನಗೆ ಅಪಮಾನ ಮಾಡಿದರು. ಬಳಿಕ ಮೈಸೂರು ಮಹಾರಾಜರ ಮಾತು ಕೇಳಿದ ಬಳಿಕ ನನಗೆ ಟಿಕೆಟ್ ಕೊಡಲಿಲ್ಲ ಎಂದರು.  ಜೆಡಿಎಸ್ ಅವರೇ ನನ್ನ ಮನೆಬಾಗಿಲಿಗೆ ಬಂದಿದ್ರು.

ಮೈಸೂರು ಮಹರಾಜ ಅಂದ್ರೆ ಜಯಚಾಮರಾಜೇಂದ್ರ ಒಡೆಯರ್ ಅಲ್ಲ. ನಮ್ಮಂತವರಲ್ಲೆ ಒಬ್ಬರು ಮಹಾರಾಜರಿದ್ದು, ಜೆಡಿಎಸ್ ಪಕ್ಷಕ್ಕೆ ಅವರೇ ಮಂತ್ರಿ, ಸೇನಾಧಿಪತಿ ಎಲ್ಲಾ ಅವರೊಬ್ಬರೆ ಆಗಿದ್ದಾರೆ. ಕಡೆಗೆ ಪಕ್ಷದಲ್ಲಿ ಅವರೊಬ್ಬರೇ ಉಳಿದುಕೊಳ್ಳುವುದು. ಎಲ್ಲರೂ ಪಕ್ಷದಿಂದ ಹೋಗಿರೋದು ಆ ಮಹಾರಾಜರಿಂದಲೇ ಎಂದು ಶಾಸಕ ಸಾ.ರಾ.ಮಹೇಶ್ ಹೆಸರೇಳದೆ ಲೇವಡಿ ಮಾಡಿದರು.

ಜನವರಿ 5ನೇ ತಾರೀಖು ನನ್ನ ಅವಧಿ ಮುಗಿಯಲಿದೆ ಅಂದು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಹೇಳುತ್ತೇನೆ. ಅಲ್ಲಿಂದ ನನ್ನ ಹೊಸ ರಾಜಕೀಯ ಜೀವನ ಆರಂಭವಾಗುತ್ತದೆ, 5ನೇ ತಾರೀಕಿನ ನಂತರ ರಫ್ ರಾಜಕಾರಣ ಮಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಗುಡುಗಿದ್ದಾರೆ.