Saturday, December 14, 2024
Homeನಾರಿ ಮಿಡಿತಯಶಸ್ವಿ ಮಹಿಳೆಯರು ಕಿರಿಯ ವಯಸ್ಕರನ್ನು ಮದುವೆ ಆಗುತ್ತಿರುವುದು ಖುಷಿಯ ವಿಚಾರ ಎಂದ ಕಂಗನಾ

ಯಶಸ್ವಿ ಮಹಿಳೆಯರು ಕಿರಿಯ ವಯಸ್ಕರನ್ನು ಮದುವೆ ಆಗುತ್ತಿರುವುದು ಖುಷಿಯ ವಿಚಾರ ಎಂದ ಕಂಗನಾ

ಮುಂಬೈ: ಚಿತ್ರರಂಗದ ಶ್ರೀಮಂತ ಮತ್ತು ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆಯಾಗುತ್ತಿರುವ ಮೂಲಕ ಸಂಪ್ರದಾಯ ಮುರಿಯುತ್ತಿದ್ದಾರೆ ಎಂದು ಬಾಲಿವುಡ್ ನಡಿ ಕಂಗನಾ ರಣಾವತ್ ಹೇಳಿದ್ದಾರೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಎಲ್ಲಿಯೂ ಈ ಜೋಡಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ಹಾಗಿದ್ದರೂ ಕಂಗನಾ ಹೇಳಿರುವುದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್​ ಕುರಿತಾಗಿಯೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಯಶಸ್ವಿ ಪುರುಷರು ವಯಸ್ಸಿನಲ್ಲಿ ತಮಗಿಂತ ತುಂಬ ಕಿರಿಯರಾದ ಮಹಿಳೆಯರ ಜತೆ ಮದುವೆ ಆದ ಕಥೆಗಳನ್ನು ಕೇಳುತ್ತ ನಾವು ಬೆಳೆದೆವು. ಗಂಡನಿಗಿಂತ ಹೆಂಡತಿಯೇ ಹೆಚ್ಚು ಸಾಧನೆ ಮಾಡಿದರೆ ಅದನ್ನು ಮಹಿಳೆಯರ ಪಾಲಿಗೆ ಒಂದು ಬಿಕ್ಕಟ್ಟಿನ ರೀತಿ ನೋಡಲಾಗುತ್ತಿತ್ತು.

ಚಿಕ್ಕ ವಯಸ್ಸಿನ ಹುಡುಗರನ್ನು ಮದುವೆ ಮಾಡಿಕೊಳ್ಳುವುದು ಹಾಗಿರಲಿ, ಒಂದು ವಯಸ್ಸು ದಾಟಿದ ನಂತರ ಮಹಿಳೆಯರು ಮದುವೆ ಆಗುವುದೇ ಅಸಾಧ್ಯವಾಗಿತ್ತು. ಆದರೆ ಈಗ ಭಾರತೀಯ ಶ್ರೀಮಂತ ಮಹಿಳೆಯರು, ಯಶಸ್ವಿ ನಟಿಯರು ಆ ಎಲ್ಲ ಹಳೆಯ ನಿಯಮಗಳನ್ನು ಮುರಿಯುತ್ತಿರುವುದು ನೋಡಲು ಖುಷಿ ಆಗುತ್ತದೆ. ಲಿಂಗ ಸಮಾನತೆ ಬಗೆಗಿನ ದೃಷ್ಟಿಕೋನ ಬದಲಿಸುತ್ತಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಅಭಿನಂದನೆಗಳು’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ನಟಿ ಕತ್ರಿನಾ ಕೈಫ್ ಡಿಸೆಂಬರ್ 9 ರಂದು ರಾಜಸ್ಥಾನದ ರಾಜಮನೆತನದ ಕೋಟೆಯಲ್ಲಿ ನಟ ವಿಕ್ಕಿ ಕೌಶಲ್​ರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರು ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ನಾಳೆ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಕಂಗನಾ ಕೂಡ ಶೀಘ್ರದಲ್ಲೇ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ತಾರೆಯರಾದ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಅವರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ಮದುವೆಯಾಗಿದ್ದಾರೆ.