24 ಡಿಬಿಪಿ 2 ದೊಡ್ಡಬಳ್ಳಾಪುರ ಕಸಬಾ-2 ರಾಜಸ್ವ ನಿರೀಕ್ಷಕ ಲಕ್ಷ್ಮೀನರಸಿಂಹ ಅವರ ಮನೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ಪರೀಶೀಲನೆ ನಡೆಸುತ್ತಿರುವುದು
ದೊಡ್ಡಬಳ್ಳಾಪುರ: ಕಸಬಾ-2 ವ್ಯಾಪ್ತಿಯ ರಾಜಸ್ವ ನಿರೀಕ್ಷಕರಾಗಿ(ಆರ್ಐ) ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮೀನರಸಿಂಹ ಇವರ ಮನೆಯ ಮೇಲೆ ಬುಧವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸಿಬಿ ಡಿವೈಎಸ್ಪಿ ಜಗದೀಶ್ ನೇತೃತ್ವದ 29 ಜನರ ತಂಡ ನಗರದಲ್ಲಿನ ಕುಚ್ಚಪ್ಪನಪೇಟೆಯಲ್ಲಿರುವ ಲಕ್ಷ್ಮೀನರಸಿಂಹ ಅವರ ಮನೆಗೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ.
ಲಕ್ಷ್ಮೀನರಸಿಂಹ ಅವರು ಸುಮಾರು 15 ವರ್ಷಗಳಿಂದಲು ನಗರ ಹಾಗೂ ಬಾಶೇಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಗ್ರಾಮ ಲೆಕ್ಕಾಧಿಕಾರಿಯಾಗಿ ಹಾಗೂ ಪ್ರಸ್ತುತ ರಾಜಸ್ವ ನಿರೀಕ್ಷಕರಾಗಿ ಕತ್ಯವ್ಯ ನಿರ್ವಹಿಸುತ್ತಿದ್ದರಾರೆ. ಎಸಿಬಿ ಅಧಿಕಾರಿಗಳ ತಂಡ ಲಕ್ಷ್ಮೀನರಸಿಂಹ ಅವರ ಮನೆಯಲ್ಲಿನ ಚಿನ್ನ,ಬೆಳ್ಳಿ,ನಗರದು ಹಾಗೂ ಜಮೀನು,ಮನೆಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದ ತಾಲ್ಲೂಕು ಕಚೇರಿ ಆವರಣದಲ್ಲಿನ ಲಕ್ಷ್ಮೀನರಸಿಂಹ ಅವರ ಕಚೇರಿ ಸೇರಿದಂತೆ 4 ಕಡೆಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.