Monday, May 19, 2025
Homeಕ್ರೀಡೆರಾಷ್ಟ್ರೀಯ ಮಾಸ್ಟರ್ಸ್‌ ಈಜು: ನಂದಿತಾ, ಬಸುದೇವ್‌ಗೆ ಚಿನ್ನ

ರಾಷ್ಟ್ರೀಯ ಮಾಸ್ಟರ್ಸ್‌ ಈಜು: ನಂದಿತಾ, ಬಸುದೇವ್‌ಗೆ ಚಿನ್ನ

ಮಂಗಳೂರು: ಕರ್ನಾಟಕದ ನಂದಿತಾ ಕಪೂರ್ ಹಾಗೂ ಬಸುದೇವ್‌ ಅವರು ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಮಂಗಳೂರಿನ ಸಂತ ಅಲೋಷಿಯಸ್‌ ಈಜುಕೊಳದಲ್ಲಿ ಶುಕ್ರವಾರ ಆರಂಭವಾದ ಚಾಂಪಿಯನ್‌ಷಿಪ್‌ನ ಮಹಿಳೆಯರ 100 ಮೀಟರ್ಸ್ ಫ್ರೀಸ್ಟೈಲ್‌ ‘ಎಫ್‌’ ಗುಂಪು ವಿಭಾಗದಲ್ಲಿ ಮತ್ತು 100 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.

ಪುರುಷರ ವಿಭಾಗದಲ್ಲಿ ಬಸುದೇವ್ ಸಹಾ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.