Saturday, December 14, 2024
Homeಸುದ್ದಿರಾಷ್ಟ್ರೀಯರೈತ ನಾಯಕನನ್ನು ಉಗ್ರಗಾಮಿ ಎಂದು ಕರೆದ ಬಿಜೆಪಿ ನಾಯಕ

ರೈತ ನಾಯಕನನ್ನು ಉಗ್ರಗಾಮಿ ಎಂದು ಕರೆದ ಬಿಜೆಪಿ ನಾಯಕ

ಹೊಸದಿಲ್ಲಿ: ರೈತನಾಯಕ, ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಬಿಜೆಪಿ ನಾಯಕ, ಮಾಜಿ ಸಂಸದ ಹರಿನಾರಾಯಣ್ ರಾಜ್ಭರ್ ಅವರು ಉಗ್ರಗಾಮಿ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಕೇಂದ್ರ ಇತ್ತೀಚಿಗೆ ಹಿಂಪಡೆದ ಕೃಷಿ ಕಾನೂನಿನಿಂದ ನಿಜವಾದ ರೈತರಿಗೆ ಲಾಭವಾಗುತ್ತಿತ್ತು, ಆದರೆ ಅದರ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಖಲಿಸ್ತಾನಿ ಗೂಂಡಾಗಳಿಗೆ ಲಾಭವಾಗುವ ಹಾಗೆ ರಾಕೇಶ್ ಟಿಕಾಯತ್ ಮಾಡಿದ್ದಾರೆ ಎಂದು ಹರಿನಾರಾಯಣ್ ಆರೋಪಿಸಿದ್ದಾರೆ.

ರೈತ ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟ 700 ಮಂದಿ ರೈತರ ಸಾವಿಗೆ ರಾಕೇಶ್ ಟಿಕಾಯತ್ ಕಾರಣವೇ ಹೊರತು ಕೇಂದ್ರ ಸರ್ಕಾರ ಅಲ್ಲ ಎಂದು ಅವರು ತೀವ್ರವಾಗಿ ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬಳಿಕ ಬಿಜೆಪಿಯ ಒಬ್ಬೊಬ್ಬರು ಒಂದೊಂದು ದಿನ ಹೇಳಿಕೆ ನೀಡುತ್ತಾ ವಿವಾದ ಸೃಷ್ಟಿಸುತ್ತಿದ್ದಾರೆ. ಅದಕ್ಕೆ ಈಗ ಹರಿನಾರಾಯಣ್‌ ಸೇರ್ಪಡೆಗೊಂಡಿದ್ದಾರೆ.